ಮಡಿಕೇರಿಯ ಕುಶಾಲ್‌ಗೆ ಚಿನ್ನ
Update: 2016-05-09 22:10 IST
ಮಡಿಕೇರಿ, ಮೇ 9: ಚೀನಾದ ಕಿಂಗ್‌ಡಮ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಟೆಕ್ವಾಂಡೊ ಚಾಂಪಿ ಯನ್‌ಶಿಪ್‌ನಲ್ಲಿ ನಗರದ ಮರ್ಕರ ಟೆಕ್ವಾಂಡೊ ಕ್ಲಬ್‌ನ ಕುಶಾಲ್ ಚಿನ್ನ ಮತ್ತು ಬೆಳ್ಳಿ ಪದಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮೇ 1ರಿಂದ 3ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ 20 ಮಂದಿಯ ಭಾರತ ತಂಡದಲ್ಲಿ ಕುಶಾಲ್ ಸೇರಿದಂತೆ ಕರ್ನಾಟಕದ ನಾಲ್ಕು ಮಂದಿ ಭಾಗವಹಿಸಿದ್ದರು. ಕೊಡಗಿನಿಂದ ಪ್ರತಿನಿಧಿಸಿದ್ದ ಕುಶಾಲ್ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿ ಯಾಗಿದ್ದಾರೆ. ಭಾರತ, ಪಾಕಿಸ್ತಾನ, ಇಂಡೋನೇಷಿಯಾ, ಕೊರಿಯಾ, ಜಪಾನ್ ಸೇರಿದಂತೆ ವಿವಿಧ ದೇಶಗಳ ಟೆಕ್ವಾಂಡೊ ಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.