×
Ad

ಮಹಾಪುರುಷರು ಜಾತಿಯ ಸಂಕೋಲೆಯಿಂದ ಬಿಡುಗಡೆಯಾಗಲಿ: ಶಾಸಕ ವೈ.ಎಸ್.ವಿ. ದತ್ತ

Update: 2016-05-09 22:11 IST

ಕಡೂರು, ಮೇ9: ಮಹಾಪುರುಷರನ್ನು ಜಾತಿಯ ಸಂಕೋಲೆಯಿಂದ ಬಿಡುಗಡೆಗೊಳಿಸುವ ಕಾರ್ಯವಾಗ ಬೇಕಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದ್ದಾರೆ. ಅವರು ಸೋಮವಾರ ತಾಲೂಕು ಆಡಳಿತ, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಬಸವೇಶ್ವರ ಜಯಂತಿ ಆಚರಣೆಗೆ ಮುನ್ನ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ ನಂತರ ತಾಪಂ ಸಭಾಂಗಣದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಲಸ ಮಾಡಲು ಮನಸು ಬೇಕು, ಇದಕ್ಕಾಗಿ ಬರುವ ಅಪಸ್ವರಗಳಿಗೆ ತಲೆಕೆಡಿಸಿಕೊಳ್ಳಬಾರದು. ಇದು ಬಸವಣ್ಣನವರ ತತ್ವವೂ ಆಗಿದೆ. ಎಲ್ಲರನ್ನೂ ಎದುರು ಹಾಕಿಕೊಂಡು ಒಂದು ದೊಡ್ಡ ಪ್ರಯತ್ನ ನಡೆಸಲಾಗುತ್ತಿದೆ. ಕಾಯಕದ ನಂತರ ಸಾರ್ವಜನಿಕರೊಂದಿಗೆ ದಾಸೋಹ ಕಾರ್ಯವನ್ನು ಕೈಗೊಂಡು ಬಸವಣ್ಣನವರ ಆದರ್ಶ ಅನುಷ್ಠಾನಗೊಳಿಸುವ ಕೆಲಸವಾಬೇಕಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಭಾಗ್ಯ, ಜಿಪಂ ಕಾವೇರಿ ಲಕ್ಕಪ್ಪ, ಕೃಷಿ ಮಾರುಕಟ್ಟೆಯ ಸಮಿತಿ ಅಧ್ಯಕ್ಷ ಎಂ. ರಾಜಪ್ಪ, ಕಡೂರು ಪುರಸಭೆ ಅಧ್ಯಕ್ಷೆ ಅನಿತಾ, ಬೀರೂರು ಪುರಸಭಾ ಅಧ್ಯಕ್ಷೆ ಮಮತ, ತಾಪಂ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ಎಂ. ಲೋಕೇಶ್, ತಾಲೂಕು ಅಧ್ಯಕ್ಷ ಬಿಸಲೆರೆ ದೇವರಾಜ್, ಸಾಧುವೀರ ಸಮಾಜದ ಅಧ್ಯಕ್ಷ ಸಿ.ಎನ್. ಶೇಖರಪ್ಪ, ಕಾಮನಕೆರೆ ಶಶಿಧರ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ವಿ. ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News