×
Ad

‘ನಿರಂತರ ಹೋರಾಟದಿಂದ ಸೌಲಭ್ಯ ಪಡೆಯಲು ಸಾಧ್ಯ: ಎನ್.ರಾಜು

Update: 2016-05-09 22:14 IST

ತರೀಕೆರೆ, ಮೇ 9: ನಿಸ್ವಾರ್ಥ ಹಾಗೂ ನಿರಂತರ ಹೋರಾಟದಿಂದ ಮಾತ್ರ ತಮ್ಮ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು ಅಭಿಪ್ರಾಯಪಟ್ಟಿದ್ದಾರೆ.

ಅವರು ಸೋಮವಾರ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಆಯೋಜಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆೆ ಹಾಗೂ ಕಾಯಕಯೋಗಿ ಶ್ರೀಗುರು ಬಸವ ಜಯಂತ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

 ಸೌಲಭ್ಯಗಳನ್ನು ಪಡೆದುಕೊಳ್ಳಲು ಹೋರಾಟಗಳು ಬೇಕು. ಆದರೆ ಹೋರಾಟಗಾರರಿಗೆ ಅಧಿಕಾರ ಬೇಕಾಗಿಲ್ಲ. ರೈತರು, ಕಾರ್ಮಿಕರ ಬಗ್ಗೆ ಸರಕಾರಗಳು ಗಮನ ಹರಿಸಲಿ ಎಂದರು. ಕಾರ್ಮಿಕ ಮುಖಂಡ ಬಿ.ಅಮ್ಜದ್ ಮಾತನಾಡಿ, ಕಾರ್ಮಿಕರು ಗಣ ಪ್ರಜ್ಞೆ ಹಾಗೂ ಆತ್ಮ ಗೌರವದಿಂದ ಬದುಕಬೇಕು . ಕಾರ್ಮಿಕ ವರ್ಗಕ್ಕೆ ಜಾತಿ, ಧರ್ಮದ ಬೇಧವಿಲ್ಲ ಎಂದರು. ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಶಿವ ಮೊಗ್ಗದ ಪಿಆರ್‌ಒ ವಿಶ್ವನಾಥ್ ನಾಯಕ್ ಮಾತನಾಡಿ, ಸಂಸ್ಥೆ ಹಲವು ಪ್ರಗತಿಪರ ಕೆಲಸಗಳನ್ನು ನಿರ್ವಹಿಸಿದೆ. ಸಂಸ್ಥೆಯಲ್ಲಿ ಕೆಲಸ ಮಾಡುವವರು ಪ್ರಾಮಾಣಿಕರಾಗಿರಬೇಕು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನೈಜ ಸಮಸ್ಯೆಗಳಿಗೆ ಪೂರಕವಾದ ಹೋರಾಟಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕ ಸುಬ್ರಹ್ಮಣ್ಯ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯ ತಾಲೂಕು ಅಧ್ಯಕ್ಷ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪುರಸಭಾಧ್ಯಕ್ಷ ಎಂ.ನರೇಂದ್ರ, ಸಂಸ್ಥೆಯ ಶಿವಮೊಗ್ಗ ಜಿಲ್ಲಾಧ್ಯಕ್ಷ ಮಂಜುನಾಥ್, ರಾಜ್ಯ ಕಾರ್ಯದರ್ಶಿ ಸಿ.ಆರ್.ಕಿರಣ್, ರೈತ ಮುಖಂಡ ಡಿ.ಸಿ.ಸುರೇಶ್, ಸಂಪನ್ಮೂಲ ವ್ಯಕ್ತಿ ಸುಧಾ, ಕಸಾಪ ತಾಲೂಕು ಅಧ್ಯಕ್ಷ ದಾದಾಪೀರ್, ಮಾನವ ಬಂಧುತ್ವ ವೇದಿಕೆ ಸಂಚಾಲಕ ಎಚ್. ಪರಶುರಾಮ್, ಸಿಪಿಐ ಮುಖಂಡ ಬಸವರಾಜ್, ಸಂಸ್ಥೆಯ ಕಾರ್ಯಕಾರಿ ಮುಖಂಡರಾದ ಬಸವಲಿಂಗಪ್ಪ, ಉನ್ನಿಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News