ಮೂಡಿಗೆರೆ ತಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ಮೂಡಿಗೆರೆ, ಮೇ 10: ಇಲ್ಲಿನ ತಾಪಂ ನೂತನ ಅಧ್ಯಕ್ಷರಾಗಿ ಬಿಜೆಪಿಯ ಕೆ.ಸಿ.ರತನ್ ಹಾಗೂ ಉಪಾಧ್ಯಕ್ಷರಾಗಿ ಸವಿತಾ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ 12 ಸದಸ್ಯ ಬಲದ ತಾಪಂನಲ್ಲಿ 8 ಸ್ಥಾನಗಳನ್ನು ಬಿಜೆಪಿ 3 ಸ್ಥಾನಗಳನ್ನು ಜೆಡಿಎಸ್ ಹಾಗೂ 1 ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿತ್ತು. ಮಂಗಳವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ 12 ಮಂದಿ ಸದಸ್ಯರು ಹಾಜರಿದ್ದರು. ರತನ್ ಮತ್ತು ಸವಿತಾ ರಮೇಶ್ ಇಬ್ಬರು ಮಾತ್ರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದುದರಿಂದ ಈ ಇಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸ್ನೇಹಲ್ ಘೋಷಣೆ ಮಾಡಿದರು.
ಚುನಾವಣೆ ಪ್ರಕ್ರಿಯೆ ವೇಳೆ ತಾಪಂ ಸದಸ್ಯರಾದ ಬಿಜೆಪಿಯ ಸುಂದರ್ ಕುಮಾರ್, ಭಾರತೀ ರವೀಂದ್ರ, ವೀಣಾ, ಮೀನಾಕ್ಷಿ, ಪ್ರಮೀಳಾ, ದೇವರಾಜ್, ಜೆಡಿಎಸ್‌ನ ರಂಜನ್ ಅಜಿತ್ ಕುಮಾರ್, ರಫೀಕ್, ಗುಲಾಬಿ, ಕಾಂಗ್ರೆಸ್‌ನ ಹಿತ್ತಲಮಕ್ಕಿ ರಾಜೇಂದ್ರ ಪಾಲ್ಗೊಂಡಿದ್ದರು.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಅಧಿಕಾರ ಬರುವುದು, ಹೋಗುವುದು ಕಾಕತಾಳಿಯವಷ್ಟೇ ಆಗಿದೆ. ಅಧಿಕಾರದಲ್ಲಿದ್ದಾಗ ಜನರ ಕಷ್ಟಗಳಲ್ಲಿ ಪಾಲ್ಗೊಳ್ಳಬೇಕು. ತಾಪಂಗೆ ಅನುದಾನ ಕಡಿಮೆ ಪ್ರಮಾಣದಲ್ಲಿ ಬರು ತಿ್ತದ್ದು, ಈ ಬಗ್ಗೆ ಜನಪ್ರತಿನಿಧಿಗಳೆಲ್ಲರೂ ಸರಕಾರದ ಮೇಲೆ ಒತ್ತಡ ತಂದು ಹೆಚ್ಚು ಅನುದಾನ ತರಲು ಪ್ರಯತ್ನಿ ಸಬೇಕು ಎಂದರು.
ಎಂಎಲ್ಸಿ ಎಂ.ಕೆ.ಪ್ರಾಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ನೂತನ ಅಧ್ಯಕ್ಷ ರತನ್ ಮಾತನಾಡಿದರು. ಚುನಾವಣೆ ಬಳಿಕ ಪಟಾಕಿ ಸಿಡಿಸಿ ಸಂಭ್ರಮಿಸಿದರು
ಅಭಿನಂದನಾ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಸಿ.ಸುದರ್ಶನ್, ಚಿಕ್ಕಮಗಳೂರು ನಗರಸಭಾ ಅಧ್ಯಕ್ಷ ದೇವರಾಜ್ ಶೆಟ್ಟಿ, ಜಿಪಂ ಸದಸ್ಯರಾದ ಅಮಿತಾ ಮುತ್ತಪ್ಪ, ಸುಧಾ ಯೋಗೇಶ್, ಶಾಮಣ್ಣ, ಮುಖಂಡರಾದ ವಿ.ಕೆ.ಶಿವೇಗೌಡ, ಅರೆಕುಡಿಗೆ ಶಿವಣ್ಣ, ಪಿ.ಎಂ.ರಘು, ಜೆ.ಎಸ್.ರಘು, ಕೋಣಗೆರೆ ಸುಂದ್ರೇಶ್, ವಿನೋದ್ ಕಣಚೂರ್, ಪಂಚಾಕ್ಷರಿ, ಸುನೀಲ್ ನಿಡಗೋಡು, ಎಂ.ಎ.ಹಮ್ಮಬ್ಬ, ಪರೀ ಕ್ಷಿತ್, ಧರ್ಮಪಾಲ್, ಮನೋಜ್ ಹಳೇಕೋಟೆ, ಜಯಂತ್, ಪುರುಷೋತ್ತಮ್, ಗಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.