ಹಾವೇರಿ: ರೆಟಿನೋಪತಿ ಆಫ್ ಪ್ರೆಮೆಚ್ಯುರಿಟಿ ಅರಿವು ಅಭಿಯಾನ ಕುರಿತು ಪೂರ್ವಭಾವಿ ಸಭೆ

Update: 2016-05-12 15:29 GMT

ಹಾವೇರಿ, ಮೇ 12: ‘ರೆಟಿನೋಪತಿ ಆಫ್ ಪ್ರೆಮೆಚ್ಯುರಿಟಿ ಅರಿವು ಅಭಿಯಾನ’ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿಶೇಷವಾಗಿ ಯೋಜನೆ ರೂಪಿಸಬೇಕು. ಒಂದು ಶಿಶುವೂ ಕೂಡಾ ಕಣ್ಣಿನ ಪರೀಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು. ಕಡಿಮೆ ತೂಕದ ಮತ್ತು ಅವಧಿಪೂರ್ವ ಜನಿಸಿದ ಶಿಶುಗಳನ್ನು ಕೂಡಾ ಜಿಲ್ಲಾ ಆಸ್ಪತ್ರೆಯ 2ನೆ ಮಹಡಿಯಲ್ಲಿರುವ ಶಿಶು ತೀವ್ರ ನಿಗಾ ಘಟಕಕ್ಕೆ ಕರೆತರಲು ಕ್ರಮ ಕೈಗೊಳ್ಳಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಜೆ.ಎಮ್.ರಾಜಶೇಖರ ಸೂಚಿಸಿದ್ದಾರೆ.

ಈ ಬಗ್ಗೆ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಅಭಿಯಾನವು ಪೂರ್ಣ ಪ್ರಮಾಣದಲ್ಲಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ತಾಯಿ ಮತ್ತು ಶಿಶುಗಳ ಆರೋಗ್ಯ ರಕ್ಷಣೆಯಲ್ಲಿ ತಾಯಿಂದಿರಿಗೆ ಪೋಷಕ ಆಹಾರದ ಮಹತ್ವ ಮತ್ತು ಸರಿಯಾದ ಸಮಯದಲ್ಲಿ ವೈದ್ಯಕೀಯ ಸೇವೆಯನ್ನು ನಿಯಮಿತವಾಗಿ ಪಡೆದುಕೊಳ್ಳುವುದು ಹಾಗೂ ಚುಚ್ಚುಮದ್ದು ಕಾರ್ಯಕ್ರಮದ ಸೇವೆಯ ಲಾಭ ಪಡೆದುಕೊಳ್ಳುವುದರ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ ,ಆರೋಗ್ಯ ಅಧಿಕಾರಿ ಡಾ. ಅವರಾಧಿ, ಡಾ. ಭಾಗೀರಥಿ ಬಾಯಿ ಮೆಡ್ಲೇರಿ,ಡಾ.ಚಿಕ್ಕಣ್ಣನವರ್, ಹಿರಿಯ ಆರೋಗ್ಯ ಸಹಾಯಕ ಸುತಾರ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ರಂಗಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News