ಭರ್ಜರಿ ಮಳೆ, ಭರಪೂರ ಎಂಜಾಯ್ ಮಾಡಿದ ಮಂಗಳೂರು
Update: 2016-05-12 21:17 IST
ಬುಧವಾರ ಮಿಂಚಿ ಮರೆಯಾದ ಟ್ರೇಲರ್ ಬಳಿಕ ಗುರುವಾರ ಮಳೆರಾಯ ಮಂಗಳೂರಿಗೆ ಭರ್ಜರಿ ಎಂಟ್ರಿ ನೀಡಿದ್ದಾನೆ. ಗುಡುಗು, ಸಿಡಿಲು ಈ ಎಂಟ್ರಿಗೆ ಸಾಥ್ ನೀಡಿವೆ. ನಿನ್ನೆ ದರ್ಶನ ಮಾತ್ರ ನೀಡಿ ಮಾಯವಾಗಿ ನಿರಾಶೆ ಮೂಡಿಸಿದ್ದ ಮಳೆ ಇಂದು ಮಾತ್ರ ಯಾವುದೇ ದೂರಿಗೆ ಅವಕಾಶ ನೀಡಲಿಲ್ಲ. ಮೊದಲ ಬೊಂಬಾಟ್ ಮಳೆಯನ್ನು ಮಂಗಳೂರಿಗರು ಭರಪೂರ ಎಂಜಾಯ್ ಮಾಡಿದ್ದಾರೆ. ಹಲವೆಡೆ ಯುವಕರು ಮಳೆಯಲ್ಲೇ ನೆನೆದು ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.