×
Ad

ಕೆರೆ ಸಂಜೀವಿನಿ ಯೋಜನೆ ಬಳಸಿಕೊಳ್ಳಿ: ರಾಕೇಶ್ ಕುಮಾರ್ ಸೂಚನೆ

Update: 2016-05-12 22:14 IST

ಸೊರಬ, ಮೇ 12: ಕೆರೆಗಳ ಅಭಿವೃದ್ಧಿಯ ಸಲುವಾಗಿ ಸರಕಾರ ಕೆರೆ ಸಂಜೀವಿನಿ ಯೋಜನೆಯನ್ನು ಜಾರಿಮಾಡಿದ್ದು, ಯಂತ್ರಗಳ ಮೂಲಕ ಕೆರೆ ಹೂಳೆತ್ತಲು ತಾಲೂಕಿಗೆ 25ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿ ತಿಳಿಸಿದರು.

ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಬರ ಹಾಗೂ ಕುಡಿಯುವ ನೀರಿನ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾಹಿತಿ ನಿಡಿದರು.

ಕೆರೆ ಸಂಜೀವಿನಿ ಯೋಜನೆಯಲ್ಲಿ ತಾಲೂಕಿನ 41 ಗ್ರಾಮ ಪಂಚಾಯತ್‌ಗಳ ಪ್ರತಿಯೊಂದು ಗ್ರಾಮ ಪಂಚಾಯತ್‌ಗಳಿಗೆ ರೂ. 61 ಸಾವಿರ ಅನುದಾನ ದೊರೆಯಲಿದ್ದು, ಆಯಾಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೂಕ್ತ ಕೆರೆಗಳ ಪಟ್ಟಿ ತಯಾರಿಸಿ ಕ್ರಿಯಾಯೋಜನೆ ನೀಡಬೇಕು ಎಂದ ಅವರು, ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ತಾಲೂಕಿನಲ್ಲಿ ಸಮರ್ಪಕ ಕುಡಿಯುವ ನೀರಿಗಾಗಿ ನಿರಂತರ ಕೊಳವೆ ಬಾವಿಗಳ ಕೊರಸುವಿಕೆಯ ಪ್ರಯತ್ನ ವಿಫಲವಾದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ತಾಲೂಕಿನ 16 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೀವ್ರ ತರವಾದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ವೃತ್ತಿಕೊಪ್ಪಮತ್ತು ಜೋಗಿಹಳ್ಳಿಯಲ್ಲಿ 5 ಬಾರಿ ಕೊಳವೆ ಬಾವಿಗಳನ್ನು ಕೊರೆಸಿದ್ದರೂ ಕೊಳವೆ ಬಾವಿ ವಿಫಲವಾಗುತ್ತಿದ್ದ ಹಿನ್ನೆಲೆಯಲ್ಲಿ, ಸ್ಥಳ ಪರಿಶೀಲನೆ ನಡೆಸಿ ಖಾಸಗಿಯವರ ಬಳಿ ನೀರು ದೊರೆಯದಿದ್ದರೆ ಟ್ಯಾಂಕರ್ ಮೂಲಕ ತಕ್ಷಣ ಕುಡಿಯುವ ನೀರನ್ನು ಒದಗಿಸಬೇಕು ಎಂದು ತಾಪಂ ಇಒ ಎಸ್.ಎಂ.ಡಿ. ಇಸ್ಮಾಯೀಲ್ ಅವರಿಗೆ ಸೂಚಿಸಿದರು. ಹೊಸದಾಗಿ ಕೊರೆಸಿದ ಕೊಳವೆ ಬಾವಿಗಳಿಗೆ ಹಾಗೂ ಹಳೆಯ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಪಿಡಿಒಗಳು ವಿಳಂಬ ಮಾ ಡದೆ ಮೆಸ್ಕಾಂನಲ್ಲಿ ನೋಂದಣಿಮಾಡಿಕೊಳ್ಳ ಬೇಕು. ತಾಲೂಕಿನ ಕೆಲವು ಗ್ರಾಮ ಪಂಚಾಯತ್ ಕಾರ್ಯಗಳು ನಿಷ್ಕ್ರಿಯವಾಗಿದ್ದು, ಜನರ ಕಲ್ಯಾಣಕ್ಕಾಗಿ ಕಾರ್ಯೋನ್ಮುಖವಾಗದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ತಾಪಂ ಅಧ್ಯಕ್ಷ ಜೈಶೀಲಪ್ಪ, ಜಿಪಂ ಎಇಇ ನಂಜುಂಡಸ್ವಾಮಿ, ನೊಡಲ್ ಅಧಿಕಾರಿ ರವಿಕುಮಾರ್, ಇಒ ಎಸ್.ಎಂ.ಡಿ. ಇಸ್ಮಾಯೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಾಗರಾಜ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಜಿ. ಮಂಜುಳಾ, ತೋಟಗಾರಿಗೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸೋಮಶೇಖರ್ ಸೇರಿದಂತೆ ಜಿಪಂ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News