ಸುಗಮ ಆಡಳಿತ ವ್ಯವಸ್ಥೆ ಜಾರಿಗೆ ಪೊಲೀಸ್ ಇಲಾಖೆ ಕ್ರಮ
ಶಿವಮೊಗ್ಗ, ಮೇ 12: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸುಗಮವಾಗಿರುವಂತೆ ನೋಡಿಕೊಳ್ಳುವ ಸದುದ್ದೇಶದಿಂದ ಪೊಲೀಸ್ ಇಲಾಖೆಯು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಲು ಉದ್ದೇಶಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್ ಹೇಳಿದ್ದಾರೆ. ಗುರುವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆವತಿಯಿಂದ ಖರೀದಿಸಲಾದ ಡ್ರೋನ್ ಮತ್ತು ರಕ್ಷಕ್ ಅತ್ಯಾಧುನಿಕ ಪರಿಕರಗಳ ಪರೀಕ್ಷಾರ್ಥ ಉಡಾವಣೆ ನಡೆಸಿದ ನಂತರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಡ್ರೋನ್ ಆಧುನಿಕ ಯಂತ್ರವು ಪುಟ್ಟದಾದ ಹೆಲಿಕಾಪ್ಟರ್ ಮಾದರಿಯಲ್ಲಿದ್ದು, 400ಅಡಿ ಎತ್ತರ ಹಾಗೂ 1ಕಿ.ಮೀ. ಪ್ರದೇಶದ ವ್ಯಾಪ್ತಿಯಲ್ಲಿ ಹಾರಾಟ ನಡೆಸಲಿೆ. ಇದರಿಂದಾಗಿ ನಗರ ಪ್ರದೇಶದಲ್ಲಿ ಮನಸೋಇಚ್ಛೆ ವಾಹನ ಚಲಾಯಿಸುವ ವಾಹನ ಚಾಲಕರನ್ನು ನಿಯಂತ್ರಿಸಲು ಹಾಗೂ ಸಾಕ್ಷ್ಯ ಸಮೇತ ಪ್ರಕರಣ ದಾಖಲಿಸಲು ಈ ಯಂತ್ರದ ಬಳಕೆ ಆಗಲಿದೆ ಎಂದ ಅವರು, ಒಂದು ಲಕ್ಷ ರೂ.ವೌಲ್ಯದ ಬ್ಯಾಟರಿ ಚಾಲಿತ ಡ್ರೋನ್ ಯಂತ್ರವು 30ನಿಮಿಷಗಳ ಹಾರಾಟ ಸಾಮರ್ಥ್ಯ ಹೊಂದಿದ್ದು, ನಂತರ ಬ್ಯಾಟರಿ ರೀಚಾರ್ಚ್ ಮಾಡಿ ಮತ್ತೆ ಬಳಸಬಹುದಾಗಿದೆ. ಸುಮಾರು 1.6ಕೆ.ಜಿ.ತೂಕ ಹೊಂದಿದೆ ಎಂದರು. ಜಿಲ್ಲೆಯಲ್ಲಿ ನಡೆಯುವ ಪ್ರಮುಖ ಸಭೆ-ಸಮಾರಂಭಗಳಲ್ಲಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಂದರ್ಭದಲ್ಲಿ ಡ್ರೋನ್ ಸಹಾಯದಿಂದ ಕಾರ್ಯಚಟುವಟಿಕೆಯ ಸುತ್ತಮುತ್ತಲಿನ ಪ್ರದೇಶವನ್ನು ಸೂಕ್ಷ್ಮವಾಗಿ ಸೆರೆಹಿಡಿದು, ಯಾವುದೇ ಅಹಿತಕರ ಘಟನೆಗೆ ಕಾರಣರಾದವರನ್ನು ಸುಲಭವಾಗಿ ಗುರುತಿಸಿ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲು ಸಹಾಯ ಕವಾಗಲಿದೆ ಎಂದರು. ರಕ್ಷಕ್ ಎಂಬ ಆಧು ನಿಕ ತಂತ್ರಜ್ಞಾನ ಹೊಂದಿರುವ ಲಘುವಾಹವು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಚಟುವಟಿಕೆಗಳನ್ನು ವಿವಿಧ ಕೋನಗಳಿಂದ ಚಿತ್ರೀಕರಿಸಿ, ತುರ್ತು ಸಂದಭರ್ದಲ್ಲಿ ಸಹಾಯಕ್ಕೆ ಬರಲಿದೆ. ಈ ವಾಹನವು ಅಗತ್ಯಕ್ಕೆ ತಕ್ಕಂತೆ ಬಳಸಬಹುದಾದರೂ ವಿಶೇಷವಾಗಿ ಅತಿವೇಗದಲ್ಲಿ ವಾಹನ ಚಲಾಯಿಸುವವರನ್ನು ಗುರುತಿಸಿ ದಂಡನೆಗೊಳಪಡಿಸಲು ಹಾಗೂ ರಾತ್ರಿ ಗಸ್ತುಗಳಿಗೂ ರಕ್ಷಕ್ ವಾಹನವನ್ನು ಬಳಸ ಬಹುದಾಗಿದೆ. ಈ ವಾಹನದಲ್ಲಿ 2 ಮೆಘಾಫಿಕ್ಸೆಲ್ ಕ್ಯಾಮರಾವನ್ನು ಅಳವಡಿಸಲಾಗಿರುವ ಈ ಕ್ಯಾಮರಾ ಆ್ಯಪ್ ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸಲಿದೆ. ಡಿಜಿಟಲ್ ತಂತ್ರಜ್ಞ್ಞಾನ ಆಧಾರಿತ ಕ್ಯಾಮರಾವನ್ನು ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಬಳಸಲಾಗುತ್ತಿದೆ. ವಿಶೇಷವಾಗಿ ಈ ಕ್ಯಾಮರಾ ಇರುವ ವಾಹನವನ್ನು ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸಲಾಗುವುದು ಎಂದವರು ನುಡಿದರು.
ಈ ಎಲ್ಲಾ ವಾಹನಗಳ ಚಲನ-ವಲನ ಹಾಗೂ ಅವುಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಈಗಾಗಲೇ ಪ್ರತಿಷ್ಠಾಪಿಸಲಾಗಿರುವ ನಿಯಂತ್ರಣ ಕೊಠಡಿಯಿಂದಲೇ ಗಮನಿಸಬಹುದಾಗಿದೆ ಎಂದರು. ನಗರದಲ್ಲೆಡೆ ಆಯ್ದ ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ನಗರದ 90ಸ್ಥಳಗಳಲ್ಲಿ ಕ್ಯಾಮ ರಾಗಳನ್ನು ಅಳವಡಿಸಲಾಗಿದೆ. ಇನ್ನು ಹತ್ತು ಕ್ಯಾಮರಾಗಳು ಸೇರಿದಂತೆ ಒಟ್ಟು 100ಕ್ಯಾಮರಾಗಳನ್ನು ಅಳವಡಿಸಲಾಗುವುದು. ಈ ಕ್ಯಾಮರಾಗಳು ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿವೆ. ಒಂದು ಕ್ಯಾಮರ 10 ಸಿಬ್ಬಂದಿಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದೆ ಎಂದವರು ನುಡಿದರು.
ನಗರದಲ್ಲಿ ವಾಹನ ಸಂಚಾರ ಸುಗಮಗೊಳಿಸಲು 18 ಸಿಗ್ನಲ್‌ಗಳ ಅಗತ್ಯವಿದೆ. ಪೊಲೀಸ್‌ಚೌಕಿಯಲ್ಲಿ ಪದೇಪದೇ ಅವಘಡಗಳು ಸಂಭವಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
3.50ಲಕ್ಷ ರೂ. ವೌಲ್ಯದ ರಕ್ಷಕ್ ಕ್ಯಾಮರಾ :
3.50 ಲಕ್ಷ ರೂ. ವೌಲ್ಯದ ರಕ್ಷಕ್ ಕ್ಯಾಮರಾ ಕಣ್ಣುಗಳು ವಿಶೇಷವಾಗಿ ಕ್ರೈಂ ಚಟುವಟಿಕೆಗಳ ಚಿತ್ರೀಕರಣಕ್ಕೆ, ಟ್ರಾಫಿಕ್ ಹಾಗೂ ರಸ್ತೆ ಅವಘಡಗಳನ್ನು ಗುರುತಿಸಲು ಉಪಯೋಗಿಸುವ ಉದ್ದೇಶ ಹೊಂದಲಾಗಿದೆ. ಈ ಎಲ್ಲಾ ವಾಹನಗಳು ಇಂದಿನಿಂದಲೇ ಕಾರ್ಯಾರಂಭ ಮಾಡಲಿವೆ ಎಂದ ಅವರು, ಮುಂದಿನ 10-15ದಿನಗಳಲ್ಲಿ 2.50ಲಕ್ಷ ವೌಲ್ಯದ ಹೈಡ್ರೋಲಿಕ್ ಲ್ಯೂಮ್ಯಾಟಿಕ್ ಕ್ಯಾಮರಾಗಳು ಜಿಲ್ಲಾ ಕಚೇರಿಗೆ ಬರಲಿವೆ. ಅವುಗಳನ್ನು ಟೆಂಪೋ ಟ್ರಾವಲರ್ ವಾಹನಕ್ಕೆ ಅಳವಡಿಸಿ, ಬಳಸುವ ಉದ್ದೇಶ ಹೊಂದಲಾಗಿದೆ ಎಂದರು.