×
Ad

ಅಧ್ಯಕ್ಷರಾಗಿಪದ್ಮಾವತಿ , ಉಪಾಧ್ಯಕ್ಷರಾಗಿ ಶಿವಮ್ಮ ಆಯ್ಕೆ

Update: 2016-05-12 22:22 IST

ತರೀಕೆರೆ, ಮೇ 12: ತರೀಕೆರೆ ತಾಲೂಕು ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪದ್ಮಾವತಿ ಸಂಜೀವ್‌ಕುಮಾರ್, ಉಪಾಧ್ಯಕ್ಷರಾಗಿ ಶಿವಮ್ಮ ಟಿ. ಕೃಷ್ಣಮೂರ್ತಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಪದ್ಮಾವತಿ ಸಂಜೀವ್‌ಕುಮಾರ್ ಪಕ್ಷದ 12 ಸದಸ್ಯರ ಜೊತೆಗೆ ಜಾವೂರು ಕ್ಷೇತ್ರದ ಪಕ್ಷೇತರ ಸದಸ್ಯೆ ಸುಚಿತ್ರಾ ಬಾಬು ಹಾಗೂ ಮುಡು ಗೋಡು ಕ್ಷೇತ್ರದ ಪಕ್ಷೇತರ ಸದಸ್ಯ ರಾಮೇಗೌಡ ಇವರು ಬೆಂಬಲಿಸಿದ್ದರಿಂದ 14 ಮತಗಳನ್ನು ಪಡೆದು ಜಯ ಗಳಿಸಿದರು.

 ಕಾಂಗ್ರೆಸ್‌ನ ಆರ್.ಕೃಷ್ಣಪ್ಪ 4 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಒಂದು ನಾಮಪತ್ರ ಸಲ್ಲಿಕೆ ಯಾದ ಕಾರಣ ಕುಡ್ಲೂರು ಕ್ಷೇತ್ರದ ಶಿವಮ್ಮ ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾದರು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಶಾಸಕ ಡಿ.ಎಸ್.ಸುರೇಶ್, ನೀರಿನ ಸಮಸ್ಯೆ ಇರುವ ಗ್ರಾಮ ಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ವಿಚಾ

  ರದಲ್ಲಿ ತಾಲೂಕು ಆಡಳಿತ ಸಾಕಷ್ಟು ಅವ್ಯ ವಹಾರ ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ಅಧಿಕಾರಿ ವರ್ಗದವರಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಅದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಬೇಕು ಎಂದರು. ತಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಜವಾಬ್ದಾರಿ ಯುತ ಸ್ಥಾನಗಳು. ಜನತೆ ಬಿಜೆಪಿ ಪಕ್ಷದ ಬಗ್ಗೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಭಾರ ನಡೆಸಬೇಕು. ಎಲ್ಲ ಸದಸ್ಯರು ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸಬೇಕು. ನಾವು ತಾಪಂ ಆಡಳಿತದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ನೀವು ಎಲ್ಲರ ವಿಶ್ವಾಸ ಪಡೆದು ಉತ್ತಮ ಕೆಲಸ ಮಾಡಿ ಎಂದು ತಿಳಿಸಿದರು. ಜಿಪಂ ಅಧ್ಯಕ್ಷೆ ಚೈತ್ರಶ್ರೀ ಮಾತನಾಡಿ, ಪಕ್ಷಕ್ಕೆ ಕಪ್ಪುಚುಕ್ಕೆ ಬಾರದಂತೆ, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಹೆಚ್ಚು ಒತ್ತು ನೀಡೋಣ. ಬರಗಾಲವನ್ನು ಜವಾಬ್ದಾರಿಯುತವಾಗಿ ನಿಭಾಯಿಸೋಣ ಎಂದರು. ಎಂ.ಎ.ಡಿ.ಬಿ.ಮಾಜಿ.ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜನತೆ ಪಕ್ಷದ ಪರವಾಗಿ ಮತ ಚಲಾಯಿಸಿ ಗೆಲುವಿಗೆ ಕಾರಣರಾಗಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಗಮನ ದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

  ಸಮಾರಂಭದಲ್ಲಿ ಜಿಪಂ ಸದಸ್ಯರಾದ ಕೆ.ಆರ್.ಆನಂದಪ್ಪ, ಕೆ.ಎಚ್.ಮಹೇಂದ್ರ, ಅನುಸೂಯಾ, ಮಾಜಿ ಜಿಪಂ ಸದಸ್ಯ ಎಸ್.ಬಿ.ಆನಂದಪ್ಪ, ಮ್ಯಾಮ್ಕೋಸ್ ನಿರ್ದೇಶಕ ಆರ್.ದೇವಾನಂದ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಚ್.ಎಲ್.ರಮೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಮೋಹನ್‌ಕುಮಾರ್, ಮುಖಂಡರಾದ ಎಂ.ಆರ್.ಲೋಹಿತ್, ಗುಳ್ಳದಮನೆ ವಸಂತ್‌ಕುಮಾರ್, ಲಕ್ಕವಳ್ಳಿ ರಮೇಶ್, ಸದಾನಂದ್, ಸತೀಶ್‌ಚಂದ್ರ, ಲೋಹಿತ್, ಮನೋಜ್, ಕೆ.ನಾಗರಾಜ್ ಸೇರಿದಂತೆ ತಾಪಂ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News