ಸರಕಾರಿ ಆಸ್ಪತ್ರೆಯಲ್ಲಿ ಪತ್ನಿಯ ಹೆರಿಗೆ ಮಾಡಿಸಿದ ಐಎಎಸ್ ಅಧಿಕಾರಿ
Update: 2016-05-13 11:42 IST
ಎಸ್.ಎಸ್.ನಕುಲ್
ಬಳ್ಳಾರಿ, ಮೇ 13: ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳೆಂದರೆ ಹಿಂದೆಮುಂದೆ ನೋಡುವ ಜನರು ದುಬಾರಿ ಹಣ ತೆತ್ತು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವ ಪ್ರಸ್ತುತ ದಿನಗಳಲ್ಲಿ ಬಳ್ಳಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾಯನಿರ್ವಹಣಾಧಿಕಾರಿ(ಸಿಇಒ) ಎಸ್.ಎಸ್.ನಕುಲ್ ಸರಕಾರಿ ಆಸ್ಪತ್ರೆಯಲ್ಲೇ ತನ್ನ ಪತ್ನಿಯ ಹೆರಿಗೆ ಮಾಡಿಸಿದ್ದಾರೆ. ಆ ಮೂಲಕ ಸರಕಾರಿ ಆಸ್ಪತ್ರೆಯಲ್ಲೇ ತನ್ನ ಪತ್ನಿಯ ಹೆರಿಗೆ ಮಾಡಿಸಿದ್ದಾರೆ. ಆ ಮೂಲಕ ಸರಕಾರಿ ಆಸ್ಪತ್ರೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಐಎಎಸ್ ಅಧಿಕಾರಿಯಾಗಿರುವ ಎಸ್.ಎಸ್.ನಕುಲ್ ಅವರ ಪತ್ನಿ ಇಲ್ಲಿನ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಖುದ್ದು ಸಿಇಒ ಅವರ ಒತ್ತಾಸೆಯಂತೆ ಹೆರಿಗೆ ಮಾಡಿಸಲಾಗಿದೆ.