ಸಂಚಾರಿ ಪೇದೆ ಮೇಲೆ ಹಲ್ಲೆ ಪ್ರಕರಣ;ನಟಿ ಮೈತ್ರಿಯಾ ಗೌಡಗೆ 2 ವರ್ಷ ಸಜೆ
Update: 2016-05-13 17:55 IST
ಬೆಂಗಳೂರು, ಮೇ 13: ಟ್ರಾಫಿಕ್ ಪೇದೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಟಿ ಮೈತ್ರಿಯಾ ಗೌಡಗೆ ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2011 ಮೇ ತಿಂಗಳಲ್ಲಿ ನಡೆದಿದ್ದು, ಘಟನೆ ನಡೆಯುವಾಗ ಮೈತ್ರಿಯಾ ಗೌಡ ಜೊತೆ ಕಾರ್‌ನಲ್ಲಿದ್ದ ಆಕೆಯ ತಂಗಿ ಸುಪ್ರಿಯಾ, ಸಂಬಂಧಿಕರಾದ ರೂಪಾ ಮತ್ತು ರೇಖಾ ಅವರಿಗೆ 1 ವರ್ಷ ಜೈಲು ಸಜೆ ವಿಧಿಸಲಾಗಿದೆ.
ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಮೈತ್ರಿಯಾ ಗೌಡ ಅವರು ಮೊಬೈಲ್‌ನಲ್ಲಿ ಮಾತನಾಡುತ್ತಿರುವುದನ್ನು ಪ್ರಶ್ನಿಸಿದಕ್ಕಾಗಿ ಸಂಚಾರಿ ಪೇದೆ ಶಿವಕುಮಾರ್ ಮೇಲೆ ಹಲ್ಲೆ ನಡೆಸಲಾಗಿತ್ತು.
ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.