×
Ad

ನವಜಾತ ಮಗು ಕಳವು

Update: 2016-05-13 22:10 IST

ಶಿವಮೊಗ್ಗ, ಮೇ 13: ಜಿಲ್ಲೆಯ ಭದ್ರಾವತಿ ಪಟ್ಟಣದ ಸರಕಾರಿ ಆಸ್ಪತ್ರೆಯಿಂದ ನವಜಾತ ಮಗು ಕಳವು ಮಾಡಿದ ಪ್ರಕರಣದ ತನಿಖೆ ಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಸವಾ ಲಾಗಿ ಸ್ವೀಕರಿಸಿದ್ದು, ಮಗುವಿನ ಸುಳಿವು ಹಾಗೂ ಕಳ್ಳರ ಪತ್ತೆಗೆ ಇನ್ನಿಲ್ಲದ ಹರಸಾಹಸ ನಡೆಸುತ್ತಿದೆ. ಶಿಶು ನಾಪತ್ತೆ ಪ್ರಕರಣ ಪತ್ತೆ ಹಚ್ಚಲು ಭದ್ರಾವತಿ ಡಿವೈಎಸ್ಪಿ ಮತ್ತು ನ್ಯೂಟೌನ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಮೂರು ವಿಶೇಷ ಪೊಲೀಸ್ ತಂಡಗಳ ರಚನೆ ಮಾಡಲಾಗಿದೆ. ಈ ತಂಡಗಳು ನಾನಾ ದಿಕ್ಕುಗಳಲ್ಲಿ, ಹಲವು ಸ್ಥಳಗಳಲ್ಲಿ ತನಿಖೆ ನಡೆಸುತ್ತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದ್ದಾರೆ. ಶುಕ್ರವಾರ ದೂರವಾಣಿಯಲ್ಲಿ ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿ ಮಾತ್ರವಲ್ಲದೆ ಇತರೆ ಸ್ಥಳಗಳಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಒಂದು ತಂಡವು ಬೆಂಗಳೂರಿಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದೆ. ಇನ್ನಷ್ಟೆ ಮಾಹಿತಿಗಳು ಲಭ್ಯವಾಗಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಭದ್ರಾವತಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಟೊ ನಿಲ್ದಾಣಗಳು ಸೇರಿದಂತೆ ವಿವಿಧೆಡೆ ಪೊಲೀಸರು ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಅನುಮಾನದ ಮೇಲೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸಲಾಗಿದೆ. ಎಲ್ಲ ದಿಕ್ಕುಗಳಿಂದಲೂ ಮಾಹಿತಿ ಕಲೆ ಹಾಕುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮ ರಾಗಳಲ್ಲಿ ಕೆಲ ಕ್ಯಾಮ ರಾಗಳು ಕಳೆದ ಮೂರು ತಿಂಗಳ ಹಿಂದಿ ನಿಂದಲೂ ರಿಪೇರಿಯಲ್ಲಿದ್ದ ಅಂಶ ಬೆಳಕಿಗೆ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಚೆನ್ನಣ್ಣ ನವರ್ ಪ್ರತಿಕ್ರಿಯೆ ನೀಡಿದ್ದಾರೆ.

ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ

ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿಯೂ ಗುಣಮಟ್ಟದ ಸಿ.ಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡುವಂತೆ ಈಗಾಗಲೇ ಸ್ಪಷ್ಟ ನಿರ್ದೇಶನವನ್ನು ಪೊಲೀಸ್ ಇಲಾಖೆಯು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನೀಡಿದೆ. ಅಗತ್ಯವಾದರೆ ಆಸ್ಪತ್ರೆಯ ಯಾವ್ಯಾವ ವಿಭಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಬೇಕು ಎಂಬುದರ ಮಾರ್ಗದರ್ಶನ, ಸಲಹೆ-ಸೂಚನೆಯನ್ನು ಪೊಲೀಸ್ ಇಲಾಖೆ ನೀಡಲಿದೆ ಎಂದು ತಿಳಿಸಿದ್ದಾರೆ.

ಮಾಹಿತಿ ನೀಡಿದವರಿಗೆ ಬಹುಮಾನ

ಶತಾಯಗತಾಯ ಶಿಶು ಕಳವು ಪ್ರಕರಣ ಬಯಲಿಗೆಳೆಯಲು ನಿರ್ಧರಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್, ಮಗು ಹಾಗೂ ಕಳ್ಳರ ಬಗ್ಗೆ ಖಚಿತ ಮಾಹಿತಿ ನೀಡುವ ಸಾರ್ವಜನಿಕರಿಗೆ 10 ಸಾವಿರ ರೂ. ಬಹುಮಾನ ನೀಡುವ ಘೋಷಣೆ ಮಾಡಿದ್ದಾರೆ. ಮಗು ಹಾಗೂ ಕಳ್ಳರ ಬಗ್ಗೆ ಸಾರ್ವಜ ನಿಕರಿಗೆ ಏನಾದರೂ ಖಚಿತ ಮಾಹಿತಿಯಿದ್ದರೆ ಸ್ಥಳೀಯ ಪೊಲೀ ಸರಿಗೆ ಅಥವಾ ನೇರವಾಗಿ ತಮಗೆ ಮಾಹಿತಿ ನೀಡಬಹುದಾಗಿದೆ. ಖಚಿತ ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುವುದು. ಹಾಗೆಯೇ ಅಂತಹವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಚೆನ್ನಣ್ಣವನರ್ ಸ್ಪಷ್ಟಪಡಿಸಿದ್ದಾರೆ. ಶಿಶು ಕಳವು

 ಜೀವಿತಾ (25) ಎಂಬ ಮಹಿಳೆಯು ಕಳೆದ ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಭದ್ರಾವತಿಯ ಸರಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮವಿತ್ತಿದ್ದರು. ತಾಯಿ-ಮಗು ಆರೋಗ್ಯವಾಗಿದ್ದ ಕಾರಣದಿಂದ ರಾತ್ರಿ ಅವರನ್ನು ಆಸ್ಪತ್ರೆಯ ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಇವರೊಂದಿಗೆ ಸಂಬಂಧಿ ಮಹಿಳೆಯೊಬ್ಬರಿದ್ದು, ರಾತ್ರಿ ವಾರ್ಡ್‌ನ ಹೊರಭಾಗದಲ್ಲಿ ಮಲಗಿಕೊಂಡಿದ್ದರು. ಮುಂಜಾನೆ 5 ಗಂಟೆಗೆ ಪಕ್ಕದಲ್ಲಿ ನಿದ್ರಿಸುತ್ತಿದ್ದ ಮಗು ಇಲ್ಲದಿರುವುದು ಕಂಡುಬಂದಿದೆ. ತಕ್ಷಣವೇ ತಾಯಿಯು ನರ್ಸ್ ಹಾಗೂ ಆಸ್ಪತ್ರೆಯ ಭದ್ರತಾ ಕಾವಲುಗಾರರ ಗಮನಕ್ಕೆ ತಂದಿದ್ದಾಳೆ. ಪೊಲೀಸರು ಇಡೀ ಭದ್ರಾವತಿ ಪಟ್ಟಣದಾದ್ಯಂತ ಶೋಧ ನಡೆಸಿದರೂ ಮಗು ಹಾಗೂ ಕಳ್ಳರ ಸುಳಿವು ಪತ್ತೆಯಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News