ತೀರ್ಥಹಳ್ಳಿ: ತಾಲೂಕು ಪ್ರಗತಿ ಪರಿಶೀಲನಾ ಸಭೆ
ತೀರ್ಥಹಳ್ಳಿ, ಮೇ 13: ತೀರ್ಥಹಳ್ಳಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾ. ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕಿನ 38 ಗ್ರಾ.ಪಂ.ಗಳಲ್ಲಿನ ಮುಖ್ಯವಾಗಿ ಕುಡಿಯುವ ನೀರಿನ ಸುಸ್ಯೆ ಹಾಗೂ ಶೌಚಾಲಯ ನಿರ್ಮಾಣದ ಬಗ್ಗೆ ಜಿಲ್ಲಾ ಯೋಜನಾಧಿಕಾರಿ ಸುಬ್ಬರಾವ್‌ರವರು ಪ್ರತಿ ಗ್ರಾಮ ಪಂಚಾಯತ್‌ಗಳ ಪಿಡಿಒ ಹಾಗೂ ಕಾರ್ಯ ದರ್ಶಿಗಳಿಗೆ ಪ್ರಗತಿಯ ಬಗ್ಗೆ ವಿವರಣೆ ಕೇಳಿದರು.
ತಾಲೂಕಿನಲ್ಲಿ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಅಂತಹ ಪ್ರದೇಶಗಳಿಗೆ ತಕ್ಷಣ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ವಿತರಿಸುವುದು ಆಯಾ ಗ್ರಾಮ ಪಂಚಾಯತ್‌ಜವಾಬ್ಧಾರಿಯಾಗಿದೆ. ಕುಕ್ಕೆ, ಬಾಂಡ್ಯ, ಬೆಜ್ಜವಳ್ಳಿ, ಕನ್ನಂಗಿ ಭಾಗದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ತಲೆದೋರಿದ್ದು, ಕೂಡಲೇ ಆ ಗ್ರಾಪಂ ವ್ಯಾಪ್ತಿಯ ಪಿಡಿಒಗಳು ಜಾಗೃತರಾಗಬೇಕೆಂದು ಸೂಚಿಸಿದರು.
13-14ನೆ ಹಣಕಾಸನ್ನು ಆಯಾ ಗ್ರಾಮ ಪಂಚಾಯತ್‌ಗಳಲ್ಲಿ ಪೂರ್ಣವಾಗಿ ಖರ್ಚು ಮಾಡಬೇಕಾಗಿದೆ. ಹಾಗೂ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಸಭೆ ಗಳನ್ನು ಪಂಚತಂತ್ರಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ಕರೆ ನೀಡಿದರು.
ತಾಲೂಕಿನ ದೇವಂಗಿ ಸೇರಿದಂತೆ ಕೆಲವೆಡೆ ಸರಕಾರಿ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕೆಂದರು. ಆರೊಗ್ಯ ಇಲಾಖೆಯಲ್ಲಿ ಸುಧಾರಣೆ ಕಂಡಿದ್ದು, 20 ಕೆಎ್ಡಿ ಪ್ರಕರಣಗಳು ಗುರುತಿಸಲಾಗಿದೆ. ಒಂದು ಡೆಂಗ್ಯು ಪ್ರಕರಣ ಕಂಡುಬಂದಿದೆ. ತಾಲೂಕಿನಲ್ಲಿ 8 ವೈದ್ಯರ ಕೊರತೆ ಹಾಗೂ ಗ್ರೂಪ್ ಡಿ ವಿಭಾಗದಲ್ಲಿ 27 ಖಾಲಿ ಹುದ್ದೆಗಳಿವೆ. ಈ ಬಗ್ಗೆ ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ ಎಂದು ತಾಲೂಕು ಮುಖ್ಯ ಆರೋಗ್ಯಾಧಿಕಾರಿ ಪ್ರಕಾಶ್ ಮಾಹಿತಿ ನೀಡಿದರು.
ಕಳೆದ ಒಂದೂವರೆ ತಿಂಗಳಿನಿಂದ ಅತಿಯಾದ ತಾಪಮಾನದಿಂದಾಗಿ ತಾಲೂಕಿನ ಮಂಡಗದ್ದೆ ಹಾಗೂ ಅಗ್ರಹಾರ ಹೋಬಳಿಯಲ್ಲಿ ಸುಮಾರು 850 ಹೆಕ್ಟೇರ್ ಪ್ರದೇಶಗಳ ಅಡಿಕೆ ಮರಗಳು ತುತ್ತಾಗಿದೆ. 4,500 ಟನ್ ಅಡಿಕೆ ಬೆಳೆ ನಾಶವಾಗಲಿದೆ ಎಂದು ತೋಟಗಾರಿಕಾ ಇಲಾಖಾಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಲೋಕೇಶ್ವರಪ್ಪ, ತಾಪಂ ಅಧಿಕಾರಿ ಲಕ್ಷ್ಮಣ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಪಂ ಸದಸ್ಯರಾದ ಕಲ್ಪನಾ ಪದ್ಮನಾಭ್, ಶ್ರೀನಿವಾಸ್, ಭಾರತಿ ಪ್ರಭಾಕರ್, ಶರತ್, ಪೂರ್ಣೇಶ್, ಉಪಸ್ಥಿತರಿದ್ದರು. ಇದೇ ಸಂದರ್ಭ ನೂತನವಾಗಿ ಆಯ್ಕೆಯಾದ ಜಿಪಂ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ತಾಲೂಕು ಪಿಡಿಒ, ಕಾರ್ಯದರ್ಶಿಗಳ ಸಂಘದ ಸಭೆ ನಡೆಯಿತು.