×
Ad

ಬಾಲ ಕಾರ್ಮಿಕ ಪದ್ಧತಿ ವಿರುದ್ಧ ದೃಢ ಸಂಕಲ್ಪ ಅಗತ್ಯ: ನ್ಯಾ.ಮುರುಗೇಶನ್

Update: 2016-05-13 23:32 IST

ಬೆಂಗಳೂರು, ಮೇ 13: ಜೀತ ಪದ್ಧತಿಯ ಮತ್ತೊಂದು ರೂಪದಲ್ಲಿರುವ ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಶೋಷಣೆ ಮತ್ತು ವೇಶ್ಯಾವಾಟಿಕೆ ಸೇರಿದಂತೆ ಇನ್ನಿತರ ಅನಿಷ್ಟ ಪಿಡುಗು ಗಳನ್ನು ಹೋಗಲಾಡಿಸಲು ಅಧಿಕಾರಿಗಳು ದೃಢ ಸಂಕಲ್ಪ ಮಾಡಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದ ಸದಸ್ಯ ನ್ಯಾ.ಡಿ.ಮುರುಗೇಶನ್ ಸಲಹೆ ನೀಡಿದ್ದಾರೆ.
ಶುಕ್ರವಾರ ವಿಕಾಸಸೌಧದ ನಾಲ್ಕನೆ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಏರ್ಪಡಿಸಿದ್ದ ‘ಜೀತ ಪದ್ಧತಿ ನಿರ್ಮೂಲನೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
  ಜೀತ ಪದ್ಧತಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರದೆ ಹೋದರೂ ಪರ್ಯಾ ಯವಾಗಿ ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಶೋಷಣೆ, ವೇಶ್ಯಾ ವಾಟಿಕೆ ಸೇರಿದಂತೆ ಇನ್ನಿತರ ಅನಿಷ್ಟ ಪಿಡುಗುಗಳು ಹೆಚ್ಚಾಗಿದ್ದು, ಅವುಗಳ ನಿರ್ಮೂಲನೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
 ಮನುಷ್ಯನ ಮೂಲಭೂತ ಅಗತ್ಯತೆಗಳಿಗೆ ಪೂರಕವಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ಕರ್ನಾಟಕ ಸರಕಾರ ಅನು ಷ್ಠಾನ ಗೊಳಿಸುತ್ತಿರುವುದು ಇತರೆ ರಾಜ್ಯಗಳಿಗೆ ಮಾದರಿ. ಮಾನವ ಹಕ್ಕುಗಳ ರಕ್ಷಣೆಯಲ್ಲಿ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳ ಶ್ರಮ ಸಾರ್ಥಕ ಮತ್ತು ಪ್ರೇರಣೆ ಎಂದು ಅವರು ಶ್ಲಾಘಿಸಿದರು.
 ರಾಜ್ಯದಲ್ಲಿನ ಜೀತ ವಿಮುಕ್ತರಿಗೆ ಕೇಂದ್ರ ಸರಕಾರದ 10 ಸಾವಿರ ರೂ.ಅನುದಾನದ ಜೊತೆಗೆ ಕರ್ನಾಟಕ ಸರಕಾರ 10 ಸಾವಿರ ರೂ.ನೀಡಿ ಅವರ ಬದುಕು ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂದ ಅವರು, ಜೀತ ವಿಮುಕ್ತರಿಗೆ ಪುನರ್ವಸತಿ ಕಲ್ಪಿಸಲು ಮೊತ್ತವನ್ನು ಮತ್ತಷ್ಟು ಹೆಚ್ಚಿಸಬೇಕೆಂದರು.
ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಗ್ರಾಮೀಣಾ ಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ಹಸಿವಿರೋ ಮನುಷ್ಯನಿಗೆ ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ಮಾಡಿದರೆ ಸಲ್ಲದು. ರಾಜ್ಯ ಸರಕಾರ ‘ಅನ್ನಭಾಗ್ಯ ಯೋಜನೆ’ಯಿಂದ ಬಡವರು ಮೂರು ಹೊತ್ತಿನಲ್ಲಿ ಒಂದು ಹೊತ್ತು ಆದರೂ ತಮ್ಮ ಹಸಿವನ್ನು ನೀಗಿಸಿಕೊಳ್ಳುವಲ್ಲಿ ಸಹಕಾರಿ ಎಂದರು.
ಜೀತ ಪದ್ಧತಿಯ ನಿರ್ಮೂಲನೆ ಪರಿಶೀಲನಾ ಸಮಿತಿ ಹಲವಾರು ಶಿಫಾರಸುಗಳನ್ನು ಮಾಡಲಾಗಿದ್ದು ಸರಕಾರಕ್ಕೆ ವರದಿ ನೀಡಲಾಗಿದ್ದು, ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ರಾಜ್ಯದಲ್ಲಿ ಬಾಕಿ ಉಳಿ ದಿರುವ ಏಳು ಸಾವಿರ ಜೀವ ವಿಮುಕ್ತಿ ಕಾರ್ಮಿಕರಿಗೆ ಪುನ ರ್ವಸತಿ ಕಲ್ಪಿಸಲು ಜುಲೈ 30ರೊಳಗೆ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ, ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಹಲವಾರು ಕ್ರಮಗಳನ್ನು ಕಾರ್ಮಿಕ ಇಲಾಖೆ ಕೈಗೊಳ್ಳಲಾಗಿದೆ. ಯಾವುದೇ ಸಮಸ್ಯೆಗಳನ್ನು ಅಧಿಕಾರಿಗಳು ಜನಪ್ರತಿನಿಧಿಗಳಷ್ಟೆ ಅಲ್ಲದೆ, ಎಲ್ಲರೂ ಅನಿಷ್ಟ ಪಿಡುಗುಗಳ ನಿರ್ಮೂಲನೆಗೆ ಕೈ ಜೋಡಿಸಬೇ ಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್, ಮಾನವ ಹಕ್ಕುಗಳ ಆಯೋಗದ ಮೀರಾ ಸಕ್ಸೇನಾ, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ನಾಗಾಂಬಿಕಾದೇವಿ, ಇಲಾಖೆ ನಿರ್ದೇಶಕ ಕೃಷ್ಣಪ್ಪ, ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಂಜೀವ್ ಕುಮಾರ್, ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಸಿಇಒಗಳು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News