ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪ್ರಶಸ್ತಿ
Update: 2016-05-13 23:48 IST
ಪ್ರಸ್ತುತ ವರ್ಷದ ಕರ್ನಾಟಕ ರಾಜ್ಯಮಟ್ಟದ ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪ್ರಶಸ್ತಿಯು ಕಾರ್ಮಲೈಟ್ಸ್ ಸಂಸ್ಥೆಯ ವಂ.ರಿಚರ್ಡ್ ಮಿನೇಜಸ್‌ರ ‘ಲೂಯಿಸ್ ಮಾರ್ಟಿನ್ ಮತ್ತು ಜೆಲಿ ಗೆರಿನ್ ಕ್ರೈಸ್ತಿಯ ಕುಟುಂಬಗಳಿಗೆ ಮಾದರಿ’ ಕನ್ನಡ ಅನುವಾದಿತ ಕೃತಿಗೆ ಲಭಿಸಿದೆ. ಜೂ.12ರಂದು ಉಡುಪಿ ಕನ್ನರ್ಪಾಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಜರಗಲಿರುವ ಕೆಥೊಲಿಕ್ ಸಭಾದ ಮಹಾಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ಲುವಿಸ್ ಡಿ ಆಲ್ಮೇಡಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.