ಜೂನ್ 27ರಂದು ಮೈಸೂರು ಯದುವೀರ್ ಒಡೆಯರ್ ವಿವಾಹ
Update: 2016-05-14 16:28 IST
ಮೈಸೂರು, ಮೇ 14: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಾಹ ಜೂನ್ 27ರಂದು ನಿಗದಿಯಾಗಿದ್ದು, ವಿವಾಹದ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಜೂನ್ 24 ರಿಂದ 29ರವರೆಗೆ ಅರಮನೆಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಜೂನ್ 24 ರಿಂದ ಮದುವೆಯ ಪೂರ್ವ ತಯಾರಿ ಕಾರ್ಯಕ್ರಮಗಳು ನಡೆಯಲಿದ್ದು, 28 ಹಾಗೂ 29 ಎರಡು ದಿನಗಳ ಕಾಲ ಮದುವೆ ಆರತಕ್ಷತೆ ಏರ್ಪಡಿಸಲಾಗಿದೆ. ಪಾರಂಪರಿಕ ಹಾಗೂ ಸಾಂಪ್ರಾದಾಯಿಕವಾಗಿ ಮೈಸೂರು ಅರಮನೆಯಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿದು ಬಂದಿದೆ.