×
Ad

ಗಂಗಾ ಸಮಾಜಕ್ಕೆ ಗುರು ಇಲ್ಲದೆ ಸಮಾಜದ ಅಭಿವೃದ್ಧಿ ಅಸಾಧ್ಯ: ಚೌಡಯ್ಯ ಸ್ವಾಮೀಜಿ

Update: 2016-05-14 22:10 IST

ಅನಾ್ಯಯದ ವಿರುದ್ಧ ಧ್ವನಿಯೆತಿ್ತದ ಏಕೆಕ ಶರಣ ಅಂಬಿಗರ ಚೌಡಯ್ಯ

ಕಡೂರು, ಮೇ 14: ನೇರ-ನಿಷ್ಠೂರ ಮಾತುಗಳಿಂದ ಅನ್ಯಾಯದ ವಿರುದ್ಧ ದನಿಯೆತ್ತಿದ ಏಕೈಕ ಶರಣ ಎಂದರೆ ನಿಜಶರಣ ಅಂಬಿಗರ ಚೌಡಯ್ಯ. ಗಂಗಾ ಸಮಾಜಕ್ಕೆ ಗುರು ಇಲ್ಲದೆ ಸಮಾಜದ ಅಭಿವೃದ್ಧಿ ಅಸಾಧ್ಯವಾಗಿದೆ ಎಂದು ನಿಜಗುಣ ಅಂಬಿಗರ ಚೌಡಯ್ಯನವರ ಪೀಠ ಹಾವೇರಿನ ಜಿಲ್ಲೆಯ ನರಸೀಪುರದ ಮಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.

ಅವರು ಸಮೀಪದ ಮಲ್ಲೇಶ್ವರ ಗ್ರಾಮದಲ್ಲಿ ಕಡೂರು ತಾಲೂಕು ಗಂಗಾಮತಸ್ಥರ ಸಂಘ ಮತ್ತು ಮಲ್ಲೇಶ್ವರ ಗ್ರಾಮದ ಗಂಗಾಮತಸ್ಥರು ಶ್ರೀ ಸ್ವರ್ಣಾಂಭ ದೇವಿಯವರ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಗಂಗಾ ಜಯ ಂತ್ಯೋತ್ಸವ ಹಾಗೂ ಶ್ರೀ ನಿಜಗುಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯ ಕ್ರಮದ ಸಾನಿಧ್ಯ ವಹಿಸಿ ಮಾತ ನಾಡಿದರು. ಯಾವುದೇ ಸಮಾಜಕ್ಕೆ ಗುರು ಮತ್ತು ಗುರಿ ಇಲ್ಲದೆ ಅಭಿವೃದ್ಧಿ ಅಸಾಧ್ಯ. ಶಿವಶರಣ ಚೌಡಯ್ಯ ಶರಣರಲ್ಲಿ ನಿಜಶರಣ ಎಂದು ಕರೆಯಿಸಿಕೊಂಡವರು. ಇವರು ನೇರ ನುಡಿಯ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ಏಕೈಕ ಶರಣ ಎಂದು ಹೇಳಿದರು.

ಸಮಾಜದಲ್ಲಿ ಮೇಲ್ವರ್ಗದವರ ವಿರುದ್ಧ ಕೆಳ ವರ್ಗದವರ ಪರವಾಗಿ ಧ್ವನಿಯೆತ್ತಿ ಮೂಢ ನಂಬಿಕೆ ವಿರುದ್ಧ ನೇರವಾಗಿ ಮಾತನಾಡುವ ಗುಣ ಹೊಂದಿದವರಾಗಿದ್ದರು. ನಾವೇ ಶ್ರೇಷ್ಠ ಜನಾಂಗದವರು ಎಂದು ಹೇಳಿಕೊಳ್ಳುವವರನ್ನು ನೇರ ಮಾತುಗಳಿಂದ ಖಂಡಿಸುತ್ತಿದ್ದರು. ಈ ಸಮಾಜದವರು ಕೀಳರಿಮೆ ತ್ಯಜಿಸಿ, ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಬೇರೆಯವರ ಹಿಂದೆ ಹೋಗದೆ ಸಮಾಜದ ಸುಧಾರಣೆಗೆ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ಕ್ಷೇತ್ರದ ಶಾಸಕ ವೈ.ಎಸ್.ವಿ. ದತ್ತರವರು ಮಾತನಾಡಿ, ಅಂಬಿಗರ ಚೌಡಯ್ಯ ಎಂದರೆ ಆಕ್ರೋಶದ ಸಂಕೇತ, ಮೇಲ್ವರ್ಗದವರಿಗೆ ಕೆಳ ವರ್ಗದ ಬಗ್ಗೆ ಹೃದಯ ವೈಶಾಲತೆ ಇರಬೇಕಿದೆ. ಮೇಲ್ವರ್ಗದವರು ಸಿಕ್ಕಿದ್ದೆಲ್ಲಾ ನಮಗೇಬೇಕು ಎಂಬಂತಾಗಿದೆ. ಸಿ.ಇ.ಟಿ.ಯಲ್ಲಿ ಉಪವೀರ, ಗಂಗಾಮತಸ್ಥರಿಗೆ ಮೆಡಿಕಲ್ ಸೀಟುಗಳು ದೊರೆ ಯುತ್ತವೆ. ಮೀಸಲಾತಿ ರಾಜ್ಯದಲ್ಲಿಲ್ಲ. ಇದರಿಂದ ಈ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಒ.ಬಿ.ಸಿ. ಯಲ್ಲಿ ಎಲ್ಲರೂ ಒಂದೇ ಎಂಬಂತಾಗಲಿದೆ. ವಿಶೇಷ ಸೌಲಭ್ಯಗಳು ತಪ್ಪಿ ಹೋಗಲಿವೆ ಎಂದರು. ಸಾಮಾಜಿಕ ನ್ಯಾಯ ದೊರೆಯುವುದು ಕಷ್ಟಸಾಧ್ಯವಾಗಿದೆ. ಮೀಸಲಾತಿ ಭಿಕ್ಷೆಯಲ್ಲ. ಮೀಸಲಾತಿ ಹಕ್ಕಾಗಿ ಪ್ರತಿಪಾದಿಸಬೇಆಕಾಗಿದೆ. ಗ್ರಾಮದ ದೇವಾಲಯದ ಮುಂಭಾಗದ ಪಾರ್ಕ್ ಅಭಿವೃದ್ಧಿಗಾಗಿ ಶಾಸಕರ ಅನುದಾನದಲ್ಲಿ 5 ಲ ಕ್ಷ ರೂ., ಸಂಸದರ ಅನುದಾನದಿಂದ 5 ಲಕ್ಷ ರೂ. ಮೀಸಲಿಡಲಾಗಿದೆ. ಸುಮಾರು ಒಟ್ಟು 10 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿಗೊಳಿಸಲಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಸ್ವರ್ಣಾಂಭದೇವಿ ದೇವಾಲಯದ ಧರ್ಮದರ್ಶಿ ಎಂ.ಟಿ. ಶ್ರೀನಿವಾಸ್ ಅವರಿಗೆ ಧರ್ಮಶ್ರೀ ಬಿರುದು ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಜಿಪಂ ಮಾಜಿ ಅಧ್ಯಕ್ಷರಾದ ಕೆ.ಎಂ.ಕೆಂಪರಾಜು, ಬೆಳ್ಳಿಪ್ರಕಾಶ್, ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕೆ.ಎಸ್. ಆನಂದ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ, ಉಪಾಧ್ಯಕ್ಷೆ ರಾಧಾ, ಜಿ.ವಿ. ಮಂಜುನಾಥಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News