ಬಿಎಸ್‌ಎಫ್ ಯೋಧನಿಗೆ ಎಸ್‌ಡಿಪಿಐಯಿಂದ ಆರ್ಥಿಕ ಸಹಾಯ
ಮಡಿಕೇರಿ,ಮೇ15: ದೇಶದ ಕೋಟ್ಯಂತರ ಜನರ ರಕ್ಷಣೆಗಾಗಿ ಭಾರತದ ಕಾಶ್ಮೀರ ಗಡಿಯಲ್ಲಿ ಹಗಲು ರಾತ್ರಿ ಸೇವೆ ಸಲ್ಲಿಸಿದ ಕರ್ನಾಟಕದ ಯೋಧ ಗಡಿ ಭದ್ರತಾ ಪಡೆಯ ಜವಾನ ಕೃಷ್ಣ ನಾಯಕ್ ಎಂಬವರು ಅಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದು, 2 ಕಾಲುಗಳು ನಿಷ್ಕ್ರಿಯಗೊಂಡು ಬೆಂಗಳೂರಿನ ಹನುಮಂತನಗರದ ಮೀನಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರ ಅವರಿಗೆ ಸಹಾಯವನ್ನು ಮಾಡದೆ ನಿರ್ಲಕ್ಷಿಸಿರುವುದು ಖಂಡನೀಯ ಕೊಡಲೇ ಯೋಧನ ಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಬೇಕು ಎಂದು ಎಸ್‌ಡಿಪಿಐ ಪಕ್ಷ ಆಗ್ರಹಿಸಿದೆ.
ತನ್ನ ಜೀವನದ 14 ವರ್ಷಗಳನ್ನು ದೇಶಕ್ಕಾಗಿ ತ್ಯಾಗ ಮಾಡಿದ ಆ ಯೋಧನ ಇಂದಿನ ಪರಿಸ್ಥಿತಿಯನ್ನು ನೋಡಿದರೆ ಎಂಥವರ ಮನವು ಕರಗುತ್ತದೆ.ಈಗಾಗಲೇ ಆ ಬಡ ಯೋಧ ಸುಮಾರು 4.5 ಲಕ್ಷ ರೂ. ತನ್ನ ಚಿಕಿತ್ಸೆಗಾಗಿ ಖರ್ಚು ಮಾಡಿದ್ದಾರೆ. ಹಣಕಾಸಿನ ತೊಂದರೆಯಿಂದ ಮುಂದಿನ ಚಿಕಿತ್ಸೆಯನ್ನು ಹೇಗೆ ಪಡೆಯುವುದು ಎಂಬ ಚಿಂತೆಯಲ್ಲಿದ್ದಾರೆ. ಈ ಯೋಧನ ಕಷ್ಟಕ್ಕೆ ಸ್ಪಂದಿಸಿದ ಎಸ್‌ಡಿಪಿಐ ಪಕ್ಷ ಆಸ್ಪತ್ರೆಗೆ ಭೇಟಿ ನೀಡಿ ಸಾಂತ
್ವನ ಹೇಳಿ ಚಿಕಿತ್ಸೆಯ ಖರ್ಚಿಗಾಗಿ ಪಕ್ಷದ ವತಿಯಿಂದ ಆರ್ಥಿಕ ಸಹಾಯ ನೀಡಲಾಯಿತು.
ಧನ ಆರೋಗ್ಯ ವಿಚಾರಿಸಿದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟ್‌ರವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸರಕಾರ ಇತ್ತ ಕಡೆ ಗಮನ ಹರಿಸದಿರುವುದು ದುಃಖದ ವಿಷಯ. ತನ್ನ ಜೀವನದ ಅಮೂಲ್ಯವಾದ 14 ವರ್ಷಗಳನ್ನು ದೇಶದ ರಕ್ಷಣೆಗಾಗಿ ಸಮರ್ಪಿಸಿದ ಯೋಧನ ಚಿಕಿತ್ಸೆಗಾಗಿ ಸರಕಾರ ಸ್ಪಂದಿಸದಿರುವುದನ್ನು ಗಮನಿಸಿದರೆ ಜನಸಾಮಾನ್ಯರ ಪರಿಸ್ಥಿತಿ ಏನಾಗಬಹುದೆಂದು ಪ್ರಶ್ನಿಸಿದರಲ್ಲದೆ ಕೃಷ್ಣ ನಾಯಕ್‌ರವರ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಸರಕಾರ ಭರಿಸಬೇಕು. ಯೋಧನ ಮುಂದಿನ ಜೀವನಕ್ಕಾಗಿ ಸರಕಾರ 25 ಲಕ್ಷ ರೂ.ಪರಿಹಾರ ಧನ ನೀಡಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸುತ್ತದೆ ಎಂದರು. ಯೋಧನಿಗೆ ಸಾಂತ್ವನ ಹೇಳಲು ತೆರಳಿದ್ದ ನಿಯೋಗದಲ್ಲಿ ಬೆಂಗಳೂರು ಜಿಲ್ಲಾಧ್ಯಕ್ಷರು ಫಯಾಝ್ ಅಹ್ಮದ್, ಬೆಂಗಳೂರು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಮತ್ತು ಬೆಂಗಳೂರು ಜಿಲ್ಲಾ ಸಮಿತಿ ಸದಸ್ಯರಾದ ವಸ್ಸೀಂ ಅಹ್ಮದ್‌ಉಪಸ್ಥಿತರಿದ್ದರು.