×
Ad

ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಅನುದಾನ ನೀಡಲು ಒತ್ತಾಯ

Update: 2016-05-16 22:16 IST

ಸಾಗರ,ಮೇ16: ವಿಪರೀತ ಬಿಸಿಲಿನಿಂದ ಅಡಿಕೆ ಮರಗಳು ಪೂರ್ಣ ಒಣಗಿ, ಬೆಳೆನಾಶವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ತಕ್ಷಣ ಬರಪರಿಹಾರ ಯೋಜನೆಯಡಿ ಬೆಳೆಗಾರರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಂತ್ ಒತ್ತಾಯಿಸಿದ್ದಾರೆ.

ಇಲ್ಲಿನ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಸೋಮವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.ಕರ್ನಾಟಕದ ಪಶ್ಚಿಮಘಟ್ಟ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ಸೊರಬ ತಾಲೂಕುಗಳಲ್ಲಿ ನೀರಿನ ಅಭಾವ ಮತ್ತು ವಾತಾವರಣದಲ್ಲಿ ಉಷ್ಣಾಂಶ ಏರಿಕೆ ಪರಿಣಾಮದಿಂದ ಶೇ. 50ರಷ್ಟು ಬೆಳೆ ನಷ್ಟವಾಗಿದೆ. ಬಿಸಿಲಿನ ಝಳಕ್ಕೆ ಅಡಿಕೆ ಮರಗಳು ಪೂರ್ಣ ಒಣಗಿ ಹೋಗಿವೆೆ. ಇದು ಅಡಿಕೆ ಮರದಲ್ಲಿ ಹೂವು ಬಿಡುವ ಕಾಲವಾಗಿದ್ದು, ಉಷ್ಣಾಂಶ ಏರಿಕೆ ಹಾಗೂ ನೀರಿನ ಕೊರತೆಯಿಂದ ಹಿಂಗಾರು ಒಣಗಿ ಬೀಳುತ್ತಿದೆ ಎಂದರು. ಬೆಳವಣಿಗೆಯಿಂದಾಗಿ ಅಡಿಕೆ ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಬೆಳೆಗಾರರಿಗೆ ಪರಿಹಾರ ನೀಡಲು ತಕ್ಷಣ ಅನುದಾನ ಬಿಡುಗಡೆ ಮಾಡಬೇಕು. ಈ ಸಂದಿಗ್ಧ್ದ ಸಮಯದಲ್ಲಿ ಗೋರಕ್ ಸಿಂಗ್ ವರದಿಯ ಶಿಫಾರಸಿನಂತೆ ಮಲೆನಾಡು ಅಡಿಕೆ ಬೆಳೆಗಾರರ ಸಹಕಾರಿ ಸಾಲ, ಬ್ಯಾಂಕ್ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

 ಬೇಲೆಕೇರಿಯಲ್ಲಿ ಸನದಿ ಸಾಹಿತ್ಯಾವಲೋಕನ ಅಂಕೋಲಾ,ಮೇ16: ಮಾತೃಭಾಷೆ ಉರ್ದುವಾಗಿದ್ದರೂ, ಓದಿದ್ದು ಆಂಗ್ಲ ಮಾಧ್ಯಮದಲ್ಲಿ ಆದರೆ, ತಮ್ಮ ಅತ್ಯುತ್ಕೃಷ್ಟ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಬೆಳಗಿ ‘ತುಳಸಿಕಟ್ಟೆ’ ಕವಿತೆಯ ಮೂಲಕ ಧರ್ಮಸಹಿಷ್ಣುತೆಯನ್ನು ಸಾರಿದ, ಅಸಂಖ್ಯಾತ ಪ್ರಶಸ್ತಿ-ಪುರಸ್ಕಾರಗಳ ಆದರಕ್ಕೆ ಪಾತ್ರವಾದ, ಸರಣಿಯಲ್ಲಿ ಪಂಪ ಪ್ರಶಸ್ತಿಗೆ ಭಾಜನರಾಗಿ ಮನೆ-ಮನಗಳ ದಿನಮಾತಾಗಿರುವ 84ರ ತುಂಬು ಬದುಕಿನ ನಾಡಿನ ಹೆಸರಾಂತ ಕವಿ-ಸಾಹಿತಿ ಡಾ.ಬಿ.ಎ.ಸನದಿ ಎಂದು ಹಿರಿಯ ಸಾಹಿತಿ ವಿಷ್ಣು ನಾಯ್ಕ ಹೇಳಿದ್ದಾರೆ.

ರವಿವಾರ ಬೇಲೆಕೇರಿ ಕೇಶವಾನಂದ ನಾಯಕರ ಮನೆಯಂಗಳದಲ್ಲಿ ಕನ್ನಡ ಚಂದ್ರಮ, ಉತ್ತರ ಕನ್ನಡದವರು ಆಯೋಜಿಸಿದ ಸನದಿ ಸಾಹಿತ್ಯಾವಲೋಕನ ಹಾಗೂ ಅಕ್ಷಯ ಸೇವಾ ಬಾವಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಶಾಂತಾರಾಮ ನಾಯಕ ಹಿಚ್ಕಡ ಅವರು, ಸನದಿಯವರ ಕವನಗಳ ವಾಚನದ ಕುರಿತು ಮಾತನಾಡುವ ಮೂಲಕ ಸನದಿಯವರಿಗೆ ಪಂಪ ಪ್ರಶಸ್ತಿ ಲಭಿಸಿರುವುದು ಅವರು ರಚಿಸಿದ ಕವಿತೆ ಮತ್ತು ಬರಹಗಳ ಮೌಲ್ಯಕ್ಕೆ ಸಿಕ್ಕಿದ ಗೌರವವು ಇತಿಹಾಸದಲ್ಲಿ ಬರೆದಿಡುವಂತಾಗಿದೆ ಎಂದರು. ಸನದಿ ಕಾವ್ಯ ಚಿಂತನದಲ್ಲಿ ಸನದಿ ಸಾಹಿತ್ಯದಲ್ಲಿ ಧರ್ಮ ಸಮನ್ವಯತೆ ವಿಷಯದ ಕುರಿತು ಡಾ. ಶ್ರೀಧರ ನಾಯಕ ಬೇಲೆಕೇರಿ ಮತ್ತು ಸನದಿಯವರ ಕವಿತೆಗಳಲ್ಲಿ ಮನುಷ್ಯ ಪ್ರೀತಿ ವಿಷಯ ಕುರಿತು ಪ್ರೊ.ರಾಮ ನಾಯಕ ಅಸ್ನೀರು ಉಪನ್ಯಾಸ ನೀಡಿದರು. ಪ್ರೊ.ಹಬ್ಬು, ಕೆ.ಆರ್. ನಾಯಕ ಬೇಲೇಕೇರಿ, ನಾಗೇಂದ್ರ ನಾಯಕ ತೊರ್ಕೆ, ಅಕ್ಷತಾ ಕೃಷ್ಣಮೂರ್ತಿ, ಜೇ. ಪ್ರೇಮಾನಂದ, ರೇಣುಕಾ ರಮಾನಂದ, ಗೋಪಾಲಕೃಷ್ಣ ನಾಯಕ, ದಿನಕರ ನಾಯಕ, ಜಯಶೀಲ ಆಗೇರ ಇವರು ಸನದಿಯವರ ಕವನಗಳನ್ನು ವಾಚಿಸಿದರು. ಈ ಸಂದರ್ಭದಲ್ಲಿ ಕನ್ನಡ ಚಂದ್ರಮ ಉತ್ತರ ಕನ್ನಡ ಇವರಿಂದ ಡಾ.ಬಿ.ಎ.ಸನದಿ ಅವರು ಸನ್ಮಾನ ಗೌರವವನ್ನು ಸ್ವೀಕರಿಸಿ ಮಾತನಾಡಿ, ಹಿರಿಯ ಮತ್ತು ಕಿರಿಯ ಕವಿಗಳು ಬರೆದಿರುವ ಎಷ್ಟು ಪುಸ್ತಕಗಳನ್ನು ಬಿಡುಗಡೆಗೊಳಿಸಿದ್ದೇನೆ, ಆದರೆ, ಬೇಲೆಕೇರಿ ಕೇಶವಾನಂದ ನಾಯಕ ಅವರ ಅಕ್ಷಯ ಸೇವಾ ಬಾವಿಯ ಉದ್ಘಾಟನೆ ಮಾಡಿರುವುದು ನನ್ನ ಜೀವನದಲ್ಲಿ ಮೊದಲನೆಯದು. ಇಂದಿನ ದಿನಗಳಲ್ಲಿ ನೀರಿನ ತುಟಾಗ್ರೆತೆಯಲ್ಲಿ ಸಾರ್ವಜನಿಕರಿಗಾಗಿ ಬಾವಿ ಲೋಕಾರ್ಪಣೆ ಮಾಡಿರುವುದು ಇದು ದಾನಗಳಲ್ಲಿ ದೊಡ್ಡ ದಾನ ಎಂದು ಹೇಳಿದರು.

ನಾವು ಆಯ್ಕೆ ಮಾಡಿದ ಸರ್ಕಾರ ಹಾಗೂ ನಾವು ನೇಮಕ ಮಾಡಿದ ನ್ಯಾಯಾಲಯಗಳು ನಮ್ಮ ಹಿತಾಸಕ್ತಿಗೆ ವಿರುದ್ದವಾಗಿ ನಿಂತಿದೆ. ಮಲೆನಾಡಿನ ಅನೇಕ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಮುಂದಾಗಿರುವುದು ಬೆಳೆಗಾರರನ್ನು ಬೀದಿಗೆ ತರುವ ಯೋಜನೆಯಾಗಿದೆ. ಇದನ್ನು ತಕ್ಷಣ ಕೈಬಿಡಬೇಕು. ನ್ಯಾಯಾಲಯದ ಸೂಚನೆಯಂತೆ ಅನೇಕ ವರ್ಷಗಳಿಂದ ಅಡಿಕೆ ಬೆಳೆಗಾರರು, ರೈತರು ರಕ್ಷಿಸಿ ಇರಿಸಿಕೊಂಡಿದ್ದ ಅರಣ್ಯವನ್ನು ಪರಿಭಾವಿತ ಅರಣ್ಯ ಎಂದು ಘೋಷಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಅನೇಕ ಸಮಸ್ಯೆಗಳಿಂದ ಅಡಿಕೆ ಬೆಳೆಗಾರರು ಕಂಗಾಲಾಗಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, ಬೆಳೆಗಾರರು ಇಂತಹ ನೀತಿಯ ವಿರುದ್ಧ ಬೀದಿಗಳಿದು ಹೋರಾಟ ಮಾಡಿ, ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗುವ ಅಗತ್ಯವಿದೆ ಎಂದರು. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ನಿರ್ದೇಶಕ ಆರ್.ಎಸ್.ಗಿರಿ, ತೋಟಗಾರ್ಸ್‌ ಅಧ್ಯಕ್ಷ ಕೆ.ಸಿ.ದೇವಪ್ಪ, ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಕಟ್ಟಿನಕೆರೆ ಸೀತಾರಾಮಯ್ಯ, ಜಗದೀಶ್ ಗೌಡ, ಕಾರ್ಯದರ್ಶಿ ವ.ಶಂ.ರಾಮಚಂದ್ರ ಭಟ್, ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News