×
Ad

ಕಾಯಕಕ್ಕೆ ಜಾತಿಯ ಪಟ್ಟ ವಿಪರ್ಯಾಸ: ಖರ್ಗೆ

Update: 2016-05-16 23:26 IST

ಬೆಂಗಳೂರು, ಮೇ 16: ಯಾವುದೇ ಧರ್ಮದಲ್ಲಿ ಏನೇ ಕೆಲಸ ಮಾಡಿ ದರೂ ಕೀಳುಮಟ್ಟದಲ್ಲಿ ಕಾಣುವುದಿಲ್ಲ. ಆದರೆ ಹಿಂದೂ ಧರ್ಮದಲ್ಲಿ ಮಾತ್ರ ಯಾವುದೇ ಕಾಯಕ ಮಾಡಿದರೂ ಅದಕ್ಕೊಂದು ಜಾತಿಯ ಪಟ್ಟ ಕಟ್ಟುವುದು ದುರ್ದೈವದ ಸಂಗತಿ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಸ್ವಾತಂತ್ರ ಉದ್ಯಾನದಲ್ಲಿ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಆಯೋ ಜಿಸಿರುವ ರಾಜ್ಯಮಟ್ಟದ ಚರ್ಮ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ಚರ್ಮ ಕೈಗಾರಿಕೆ ಮತ್ತು ಮಾರುಕಟ್ಟೆಯಲ್ಲಿ ಮುಸ್ಲಿಮ್ ಮತ್ತು ಕ್ರೈಸ್ತರದ್ದೇ ಮೇಲುಗೈ. ಇಲ್ಲಿ ಈ ಕಾಯಕಕ್ಕೆ ಯಾವುದೇ ಜಾತಿಯ ಲೇಪನವಿಲ್ಲ, ಮೇಲು ಕೀಳೆಂಬ ಭಾವನೆಯಿಲ್ಲ. ಆದರೆ ಹಿಂದೂಗಳಲ್ಲಿ ಈ ಕ್ಷೇತ್ರದಲ್ಲಿ ತೊಡಗಿದವರನ್ನು ಕೀಳು ಜಾತಿಯಿಂದ ಗುರುತಿಸುವುದು ದುರ್ದೈವ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಚಹಾ ಅಂಗಡಿ ಇಟ್ಟಿದ್ದೆ, ಚಹಾ ಮಾರುತ್ತಿದ್ದೆ ಎಂದು ಹೇಳಿಕೊಂಡ ಹಿನ್ನೆಲೆಯಲ್ಲಿ ಚಹಾ ಮಾರುವ ವರಿಗೂ ಹೆಮ್ಮೆ ಬಂದಿದೆ. ಆದರೆ ನಾನು ಚಹದಂಗಡಿ ಇಟ್ಟು ಚಹಾ ಮಾರಿದರೆ ಯಾರೂ ಬಂದು ಕುಡಿಯುವುದಿಲ್ಲ. ಹಿಂದೂ ಧರ್ಮದಲ್ಲಿ ಸಾಮಾಜಿಕ ಬಂಧನಗಳು ತಲೆಯಿಂದ ಹೋಗಿಲ್ಲ. ಜಾತೀಯತೆಯ ಬೇರು ಇನ್ನೂ ಉಳಿದಿದೆ ಎಂದು ಹೇಳಿದರು.
ಶೋಷಿತ ಸಮುದಾಯ ಆರ್ಥಿಕವಾಗಿ ಮೇಲೆ ಬರಬೇಕಾದರೆ, ಜನಬಲ, ಮಾನಸಿಕ ಬಲ, ಆರ್ಥಿಕ ಬಲದಲ್ಲಿ ಯಾವುದಾದರೂ ಒಂದು ಬಲ ಗಟ್ಟಿಯಾಗಿರಬೇಕು. ಈ ರೀತಿಯಿದ್ದಾಗ ಮಾತ್ರ ಸಮಾಜದಲ್ಲಿ ಬೆಲೆ, ಗೌರವ ಸಿಗುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಅವರು ಹಣ ಬಲ ಮತ್ತು ಜನಬಲ ವಿಲ್ಲದಿದ್ದರು ಕೇವಲ ಬುದ್ಧಿಶಕ್ತಿಯಿಂದ ಸಮಾಜದಲ್ಲಿ ಗೌರವ ಸಂಪಾದಿಸಿದ್ದರು ಎಂದರು.
ದಲಿತರು ಒಂದುಗೂಡಿ ಬಾಳುವುದನ್ನು ಸಹಿಸದ ಮನಸ್ಸುಗಳು ಸಮಾಜದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಲ್ಲಿ ಗೊಂದ ಲಗಳನ್ನು ಹುಟ್ಟಿಸಿ ಹೊಡೆದು ಆಳುತ್ತಿದ್ದಾರೆ. ಇಂತಹವರು ರಾಜಕೀಯ ಉದ್ದೇಶವನ್ನು ಸಾಧಿಸಲು ದಲಿತರ ಒಗ್ಗಟ್ಟನ್ನು ಒಪ್ಪುವುದಿಲ್ಲ. ಈ ಕುತಂತ್ರಗಳನ್ನು ಮೀರಿ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಮಾರುಕಟ್ಟೆ ವಿಸ್ತರಣೆ ಅಗತ್ಯ: ಕರಕುಶಲ ಚರ್ಮೋದ್ಯಮವನ್ನು ಇನ್ನಷ್ಟು ಸುಧಾರಿಸುವ ಅಗತ್ಯವಿದೆ. ಲಾಭದ ದೃಷ್ಟಿಯಿಂದ ಚರ್ಮೋ ದ್ಯಮಕ್ಕೆ ಮಾರುಕಟ್ಟೆ ವಿಸ್ತೀರ್ಣ ಮಾಡಬೇಕು. ಹೀಗಾಗಿ ಬಾಟಾ ಕಂಪೆನಿ ಮಾದರಿಯಲ್ಲಿ ಬ್ರಾಂಡ್ ನೇಮ್ ಹುಟ್ಟುಹಾಕಿ, ಕರಕುಶಲ ವಸ್ತುಗಳನ್ನು ಮಾರಾಟ ಮಾಡಬೇಕು. ಈ ಸಂಸ್ಥೆಯ ಅಡಿಯಲ್ಲಿ ಕುಶಲಕರ್ಮಿಗಳು ತಯಾರಿಸುವ ಉತ್ಪನ್ನಗಳಿಗೆ ಜನರಿಂದ ಮನ್ನಣೆ ಸಿಗಲಿದೆ ಎಂದು ಸಲಹೆ ನೀಡಿದರು.
ಹಳೆ ಬಾಟಲಿಗಳಿಗೆ ಹೊಸ ಲೇಬಲ್ ಹಚ್ಚುವ ರೀತಿಯಲ್ಲಿ, ಕಾಂಗ್ರೆಸ್ ಸರಕಾರದ ಯೋಜನೆಗಳಿಗೆ ಮೋದಿ ಲೇಬಲ್‌ಗಳನ್ನು ಬದಲಾಯಿಸಿ, ಹೊಸ ಯೋಜನೆಯೆಂದು ಘೋಷಣೆ ಮಾಡುತ್ತಿ ದ್ದಾರೆ. ಅವರು ಘೋಷಣೆ ಮಾಡಿರುವ ಸಣ್ಣ ಕೈಗಾರಿಕೆಗಳ ಯೋಜನೆ ಯು, ಹಿಂದಿನ ಕಾಂಗ್ರೆಸ್ ಸರಕಾರದ ಯೋಜನೆಗಳಲ್ಲಿ ಒಂದು ಎಂದು ಖರ್ಗೆ ವ್ಯಂಗ್ಯವಾಡಿದರು.
    ಕಾರ್ಯಕ್ರಮದಲ್ಲಿ ಈ ಹಿಂದೆ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ, ಸಿ.ರಾಜವರ್ಧನ್, ಸೋಮು, ಕೆ.ಬಿ.ಕೃಷ್ಣಮೂರ್ತಿ, ಬಿ.ಎಎನ್.ಚಂದ್ರಪ್ಪ, ರಾಜೇಂದ್ರವರ್ಮಾರನ್ನು ಸನ್ಮಾನಿಸಲಾಯಿತು. ಸಚಿವರಾದ ಎಚ್. ಆಂಜನೇಯ, ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಾಮಕೃಷ್ಣ, ಬಿ.ಟಿ.ನಂದೀಶ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಮುಂದಿನ ಎರಡು ವರ್ಷಗಳು ಅವರೇ ಮುಖ್ಯಮಂತ್ರಿ. ಬಿಜೆಪಿಗೆ ಆರೋಪ ಮಾಡುವುದೊಂದೇ ದೊಡ್ಡ ಸಿದ್ಧಾಂತ. ಈ ಆರೋಪಗಳೆಲ್ಲ ನಮಗೆ ನಗಣ್ಯ.
- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News