×
Ad

ಇಸ್ಲಾಂ ಎಂದರೆ ಶಾಂತಿ: ಮುಹಮ್ಮದ್ ಅನ್ವರ್

Update: 2016-05-18 23:10 IST

 ಚಿಕ್ಕಮಗಳೂರು, ಮೇ 18: ಇಸ್ಲಾಂ ಎಂದರೆ ಶಾಂತಿ, ಭಯೋತ್ಪಾದನೆಯನ್ನು ಇಸ್ಲಾಂ ಒಪ್ಪುವುದಿಲ್ಲ ಎಂದು ಜಾಮೀಯಾ ಶಾದಿಯಾ ಅರೇಬಿಯಾ ವಿವಿ ಬೆಂಗಳೂರು ಕಾಲೇಜಿನ ಪ್ರಾಂಶುಪಾಲ ವೌಲನಾ ಮುಹಮ್ಮದ್ ಅನ್ವರ್ ಅಭಿಪ್ರಾಯಿಸಿದರು. ಅವರು ಖಾಂಡ್ಯ ಹೋಬಳಿ ಗೋರಿಗಂಡಿಯ ಹಜ್ರತ್‌ಖ್ವಾಜ ಅಸ್‌ಹಾಬುನ್ನಬಿ ದರ್ಗಾದಲ್ಲಿ 2ದಿನಗಳ ಉರುಸ್ ಮುಬಾರಕ್ ಅಂಗವಾಗಿ ಆಯೋಜಿಸಿದ್ದ ಔಲಿಯಾ ಮತ ಪ್ರಸಂಗ ಸಭೆಯಲ್ಲಿ ಮಾತನಾಡಿ, ಇಸ್ಲಾಂ ಪ್ರೀತಿ, ಕರುಣೆ, ಮಮತೆ, ಸಹಕಾರ, ಸಹಾಯಗಳ ಪ್ರತೀಕ. ಯಾರನ್ನೂ ನೋಯಿಸದ, ನಿಂದಿಸದ, ಕೊಲೆಮಾಡುವುದನ್ನು ಒಪ್ಪದ ಧರ್ಮವಿದು. ಇಸ್ಲಾಂ ಎಂದಿಗೂ ಭಯೋತ್ಪಾದನೆಯನ್ನು ಕಲಿಸುವುದಿಲ್ಲ. ಕುರ್‌ಆನಿನ ಆಧಾರದಲ್ಲಿ ಪ್ರವಾದಿ ಮುಹಮ್ಮದರು ಒಬ್ಬ ಮನುಷ್ಯನನ್ನು ಕೊಂದರೆ ಜಗತ್ತಿನ ಎಲ್ಲರನ್ನೂ ಕೊಂದಷ್ಟು ಘೋರ ಅಪರಾಧವಾಗುತ್ತದೆ ಎಂದಿದ್ದಾರೆ. ಇಸ್ಲಾಂನ ನೈಜ ತತ್ತ್ವಾದರ್ಶಗಳನ್ನು ಅರಿಯದವರಷ್ಟೇ ಹಿಂಸೆಯಲ್ಲಿ ತೊಡಗಲು ಸಾಧ್ಯ ಎಂದರು.

ಕಾಸರಗೋಡಿನ ಇಸ್ಲಾಂ ವಿವಿಯ ಪ್ರಾಧ್ಯಾಪಕ ವೌಲಾನಾಹಮೀದ್ ಸಹದಿ ಮಾತನಾಡಿ, ಸತ್ಕರ್ಮ ಮತ್ತು ಸತ್ಯನಿಷ್ಠೆಯೆ ಬದುಕಿನಲ್ಲಿ ಪರಿವರ್ತನೆ ತರಲು ಸಾಧ್ಯವೆಂಬುದು ಪವಿತ್ರ ಕುರಾನ್ ನಂಬಿಕೆ. ಅಂತಿಮ ವಿಶ್ರಾಂತಿಯಲ್ಲಿರುವ ಸತ್ಪುರುಷರ ಆರಾಧನೆ ನಮ್ಮೆಲ್ಲರ ಬದುಕಿಗೆ ಬೆಳಕಾಗುತ್ತದೆ ಎಂದರು.

ಗೋರಿಗಂಡಿ ದರ್ಗಾ ಸಮಿತಿ ಅಧ್ಯಕ್ಷ ಎನ್. ಪುತ್ತುಮೋಣು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋರಿಗಂಡಿ ಮದೀನಾ ಮಸೀದಿ ಖತೀಬ್ ಸೈಫುದ್ದೀನ್‌ನಿಜಾಮಿರಜ್ವಿ, ಜೇನುಗದ್ದೆ ಜಾಮೀಯಾಮಸೀದಿ ಖತೀಬ್ ಜಾಮೀಯರಜ್ವಿ, ಕಡಬಗೆರೆ ಮುಹಿಯುದ್ದೀನ್ ಜುಮಾಮಸೀದಿ ಖತೀಬ್ ವೌಲಾನಾಅಬ್ದುಲ್‌ರಹೀಮ್ ಸಖಾಫಿ ಮತ್ತಿತರರು ಮಾತನಾಡಿದರು.

ಬಾಳೆಹೊನ್ನೂರಿನ ಸುನ್ನಿ ಜಾಮಿಯಾ ಮಸೀದಿ ಖತೀಬ್ ವೌಲಾನಅಬ್ದುಲ್ ಮುಬೀನ್ ರಜ್ವಿ ನಿಜಾಮಿ ಸಭೆಯನ್ನು ಉದ್ಘಾಟಿಸಿದರು. ಕಾವಲಕಟ್ಟೆಯ ತಾಜುಶ್ ಶರಿಯದ ಖಲೀಪ್ ಅಲ್‌ಜನಾಬ್ ಸೂಫಿ ಡಾಕ್ಟರ್ ಅಲ್ಹಾಜ್ ಮುಹಮ್ಮದ್ ಫಾಝಿಲ್ ಸಾಹೇಬ್ ರಜ್ವಿ ಅಧ್ಯಕ್ಷತೆಯಲ್ಲಿ ಜಿಕ್ರ್‌ಸಲಾತ್ ಮಜ್ಲಿಸ್ ಆಚರಿಸಲಾಯಿತು.

 ಈ ಸಂದರ್ಭದಲ್ಲಿ ಯುವಸಮಿತಿ ಮುಖಂಡ ರಹೀಮ್‌ಕಡಬಗೆರೆ ಕಾರ್ಯಕ್ರಮ ನಿರೂಪಿಸಿದರು. ದರ್ಗಾಸಮಿತಿ ಕಾರ್ಯದರ್ಶಿ ಎಂ.ಇಸ್ಮಾಯಿಲ್, ಖಜಾಂಚಿ ಆದಿಲ್‌ಹುಸೈನ್, ಉಪಾಧ್ಯಕ್ಷ ಅಜ್ಮಲ್‌ಖಾನ್, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್‌ಅಹ್ಮದ್, ಗೌಸ್‌ಮೊಹಿದ್ದೀನ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News