ನಗರದಲ್ಲಿ ರಾಸಾಯನಿಕ ಮುಕ್ತ ಮಾವು ಮೇಳ

Update: 2016-05-19 17:06 GMT

ಚಿಕ್ಕಮಗಳೂರು, ಮೇ.19: ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಮಾವು ಮೇಳದಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿನ 13 ವಿವಿಧ ತಳಿಯ ಹಣ್ಣುಗಳು ಮಾರಾಟ ಮತ್ತು ಪ್ರದರ್ಶನಗೊಂಡವು.

ಇದರೊಂದಿಗೆ ಹಲಸಿನಹಣ್ಣಿನ ಸ್ವಾದಿಷ್ಟಕರ ತೊಳೆಗಳು ಸಹ ಮಾರಾಟಕ್ಕಿದ್ದವು. ನಗರದ ಗ್ರಾಹಕರು ವಿವಿಧ ಮಾದರಿಯ ಹಣ್ಣುಗಳನ್ನು ವೀಕ್ಷಿಸುವುದರೊಂದಿಗೆ ಹಲಸಿನತೊಳೆಗಳನ್ನು ಖರೀದಿಸಿ ರುಚಿ ನೋಡಿದರು.

ರಾಜ್ಯದ ಕೋಲಾರ, ರಾಮನಗರ ಸೇರಿದಂತೆ ಸ್ಥಳೀಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ವ್ಯಾಪಾರಸ್ಥರು ಸೇರಿದಂತೆ ಇಂದು ಬೆಳಿಗ್ಗೆ 10 ಮಳಿಗೆಗಳಲ್ಲಿ ಬಾದಾಮಿ, ಬಾದಾಮಿಬಾಕ್ಸ್, ರಸಪೂರಿ, ಮಲಗೋವ, ಬಂಗನಪಲ್ಲಿ, ದಶೇರಿ, ಕಾಲ್ ಪಾಡ್, ಕೇಸರ್, ಮಲ್ಲಿಕಾ, ನೀಲಂ, ಸಕ್ಕರೆ ಗುತ್ತಿ, ಸಿಂಧೂರ, ತೋತಾಪುರಿ ತಳಿಯ ಕಾರ್ಬೈಡ್ ಮುಕ್ತ ಹಣ್ಣುಗಳು ಮಾರಾಟಕ್ಕಿದ್ದವು.

ಇದೇ ಸಂದರ್ಭದಲ್ಲಿ ಸಖರಾಯ ಪಟ್ಟಣದ ಹಲಸಿನ ಹಣ್ಣು ಮತ್ತು ಸಖರಾಯಪಟ್ಟಣದ ಶಿವಣ್ಣರವರು ಹಲಸಿನ ಬೊಂಡಾ, ಹಲಸಿನ ಚಿಪ್ಸು, ಹಲಸಿನ ಹಣ್ಣಿನ ರಸವನ್ನು ಮಾರಾಟಕ್ಕಿಟ್ಟಿ ದ್ದರು. ಮಾವಿನಹಣ್ಣು ತೋಟ ಗಾರಿಕಾ ಇಲಾ ಖೆಯ ಬೆಲೆ ನಿಗದಿಯಂತೆ ಬಾದಾಮಿ ಕೆ.ಜಿ ಒಂದಕ್ಕೆ 85 ರೂ., ಬಾದಾಮಿ ಬಾಕ್ಸ್ 100 ರೂ.ಗೆ ಮಾರಾಟವಾದವು.

ರಸಪೂರಿ, ಮಲಗೋವ, ಬಂಗನಪಲ್ಲಿ, ದಶೇರಿ, ಕಲಾಪಾಡ್, ಕೇಸರ್, ಮಲ್ಲಿಕಾ, ನೀಲಂ, ಸಕ್ಕರೆಗುತ್ತಿ, ಸಿಂಧೂರ, ತೋತಾ ಪುರಿ ಮಾರಾಟಕ್ಕಿದ್ದವು. ನಗರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ವಾವು ಮೇಳದಲ್ಲಿ ಗ್ರಾಹಕರು ಪಾಲ್ಗೊಂಡು ರಾಸಾಯನಿಕ ಮುಕ್ತ ಮಾವಿನಹಣ್ಣನ್ನು ಖರೀದಿಸಿದರು. ಮಾವು ಮೇಳವನ್ನು ಜಿಲ್ಲಾಧಿಕಾರಿ ಷಡಕ್ಷರಿಸ್ವಾಮಿ, ಜಿಪಂ ಸಿಇಒ ರಾಗಪ್ರಿಯ ಮತ್ತಿತರ ಅಧಿಕಾರಿಗಳು ಜನಪ್ರತಿನಿಧಿಗಳು ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News