×
Ad

ಸೊರಬ: ಮಲೆನಾಡಿನ ಅಪ್ಪಟ ಗ್ರಾಮೀಣ ಕ್ರೀಡೆ ಕೆರೆಬೇಟೆ

Update: 2016-05-19 22:42 IST

ಸೊರಬ,ಮೇ19:ಮಲೆನಾಡಿನ ಅಪ್ಪಟ ಗ್ರಾಮೀಣ ಕ್ರೀಡೆಗಳಲ್ಲೊಂದಾದ ಕೆರೆಬೇಟೆಯು ತಾಲೂಕಿನ ತವನಂದಿ ಗ್ರಾಮದ ಹಿರಿಯ ಕೆರೆಯಲ್ಲಿ ಸಾವಿರಾರು ಜನರ ಪಾಲ್ಗೊಳ್ಳುವಿಕೆಯ ಜೊತೆಗೆ ಉತ್ಸಾಹದಿಂದ ನಡೆಯಿತು.

ತಾಲೂಕಿನ ಗುಡುವಿ, ಗುಂಜನೂರು, ಬಿಳಾಗಿ, ಕೊಡಕಣಿ, ಚಿಕ್ಕಶಕುನ, ಕುಪ್ಪಗಡ್ಡೆ, ಬೊಮ್ಮನಹಳ್ಳಿ, ದ್ಯಾವನಹಳ್ಳಿ, ಹೆಸರಿ, ಕುಪ್ಪೆ, ಕಾತೂರು, ಶಕುನವಳ್ಳಿ ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಯಿಂದ ಸಾವಿರಾರು ಜನ ಈ ಗ್ರಾಮೀಣ ಕ್ರೀಡೆ ಕೆರೆ ಬೇಟೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ಮನರಂಜನೆ ಪಡೆದುಕೊಂಡರು. ಇದೊಂದು ಹವ್ಯಾಸದ ಕ್ರೀಡೆಯಾಗಿದ್ದು, ಗ್ರಾಮೀಣಿಗರಲ್ಲಿ ಸೌಹಾರ್ದತೆ ಮತ್ತು ಸಂಪರ್ಕದ ಕೊಂಡಿಯಾಗಿದೆ. ಕೆರೆ ಬೇಟೆಯಲ್ಲಿ ಜನ ಪಾಲ್ಗೊಳ್ಳುವ ಮೂಲಕ ಪರಸ್ಪರ ಪ್ರೀತಿ ವಿಶ್ವಾಸ ಹಂಚಿಕೊಳ್ಳುತ್ತಾರೆ. ಮೀನಿನ ಬೇಟೆ ಒಂದು ಚಾಣಾಕ್ಷತನವಾಗಿದ್ದು, ಬಿದಿರಿನ ಕಡ್ಡಿಯಿಂದ ಮಾಡಿದ ಕೂಣಿಯಲ್ಲಿ ಮೀನು ಹಿಡಿಯುವುದು ಒಂದು ಕಲೆಯಾಗಿದೆ. ಕೂಣಿಯಲ್ಲಿ ಸೆರೆಸಿಕ್ಕ ಮೀನನ್ನು ಆಡಿಸಿ ಹಿಡಿಯುವುದು ಬುದ್ಧಿವಂತಿಕೆ. ಮೀನು ಹಿಡಿಯುವ ಚಾಣಾಕ್ಷತೆ ಇರುವವರಿಗೆ ಮಾತ್ರ ಮೀನು ಸಿಗುತ್ತವೆ. ಇದೊಂದು ಅಪ್ಪಟ ಗ್ರಾಮೀಣ ಪ್ರದೇಶದ ಅದೃಷ್ಟದಾಟವೆಂದರೆ ತಪ್ಪಾಗಲಾರದು. ಇಂದಿನ ಆಧುನಿಕ ಯುಗದಲ್ಲಿಯೂ ಹಿರಿಯರು, ಕಿರಿಯರು, ಉದ್ಯೋಗಿಗಳು, ವ್ಯಾಪಾರಸ್ಥರು ಎಂಬ ಭೇದವಿಲ್ಲದೆ ಕೆರೆಯಲ್ಲಿ ಬೇಟೆಗೆ ಇಳಿಯುತ್ತಾರೆ. ಕೆರೆಬೇಟೆ ಒಂದು ಹವ್ಯಾಸವಾಗಿದ್ದು, ಬೇಟೆಯ ಸಂದಭರ್ದಲ್ಲಿ ಸುಮಾರು 5 ಕೆ.ಜಿ. ತೂಕದ ವರೆಗಿನ ಮೀನುಗಳು ದೊರೆಯುತ್ತವೆ. ಹೆಚ್ಚು ಮೀನುಗಳು ದೊರೆತರೆ ಸಂಬಂಧಿಗಳಿಗೂ ಒಂದಿಷ್ಟು ಪಾಲು ನೀಡುತ್ತೇವೆ. ಮೋಹನ್ ಸಣ್ಣಕ್ಕಿ, ಮೀನುಬೇಟೆಗಾರ. ಕುಪ್ಪೆ ಗ್ರಾಮ. ಗ್ರಾಮೀಣ ಕ್ರೀಡೆಗಳಲ್ಲೊಂದಾದ ಕರೆಬೇಟೆಯಲ್ಲಿ ಬೇಟೆಗಾರರು ಮೀನನ್ನು ಹಿಡಿಯುವುದನ್ನು ನೋಡುವುದೇ ರೋಚಕ. ರಣರಂಗದಲ್ಲಿನ ಸೈನಿಕರಂತೆ ಕೆರೆಯಲ್ಲಿ ಇಳಿಯುವ ಮೀನು ಬೇಟೆಗಾರರ ಉತ್ಸಾಹ ನೋಡುಗರಿಗೆ ಕಣ್ಮನ ಸೆಳೆಯುತ್ತದೆ.

           ನೆಮ್ಮದಿ ಶ್ರೀಧರ್, ವೀಕ್ಷಕ. ಸೊರಬ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News