×
Ad

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯಿಂದ ಶಬರಿಮಲೆ ಯಾತ್ರೆ

Update: 2016-05-20 17:34 IST

ಮಂಗಳೂರು, ಮೇ 20: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ತಮ್ಮ ಸ್ನೇಹಿತ ಸಂಸದ ಶ್ರೀರಾಮುಲು ಸಹಿತ ಸ್ನೇಹಿತರೊಂದಿಗೆ ಶಬರಿಮಲೆ ಯಾತ್ರೆ ಕೈಗೊಂಡರು.

ಜನಾರ್ಧನ ರೆಡ್ಡಿ ತಮ್ಮ ಕಷ್ಟಗಳು ತೀರಲಿ, ತಮ್ಮ ಮೇಲಿನ ಆರೋಪಗಳೆಲ್ಲವೂ ನಿವಾರಣೆಯಾಗಲಿ ಎಂದು ದೇವಾಲಯಕ್ಕೆ ಹರಕೆ ಹೇಳಿಕೊಂಡಿದ್ದರು. ಈ ಹರಕೆಯನ್ನು ತೀರಿಸುವ ಸಲುವಾಗಿ ತಮ್ಮ ಪುತ್ರ ಹಾಗೂ ಸ್ನೇಹಿತರೊಂದಿಗೆ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜನಾರ್ಧನ ರೆಡ್ಡಿಯವರ ಪುತ್ರ, ಆಪ್ತ ಸಂಸದ ಶ್ರೀರಾಮುಲು, ಶಾಸಕ ನಾಗೇಂದ್ರ ಹಾಗೂ ಮತ್ತಿತರ ಸ್ನೇಹಿತರು ರೆಡ್ಡಿಯವರ ಜೊತೆಗೆ ಯಾತ್ರೆ ಕೈಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News