×
Ad

ಸೂರ್ಯ ನಮಸ್ಕಾರ ಮತ್ತು ವೇದ ಮಂತ್ರ ಪಠಣ ಮುಸ್ಲಿಮರಿಗೆ ಸಲ್ಲದು: ಎಸ್ಕೆಎಸ್ಸೆಸ್ಸೆಫ್

Update: 2016-05-20 17:42 IST

ಅಂತರಾಷ್ಟ್ರೀಯ ಯೋಗ ದಿನದಂದು ಓಂ ಹಾಗೂ ವೇದಮಂತ್ರ ಪಠಣ ಮಾಡಬೇಕೆಂದು ಆಯುಷ್ ಮಂತ್ರಾಲಯವು ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯು ಮುಸ್ಲಿಮರ ದಾರ್ಮಿಕ ನಂಬಿಕೆಗೆ ವಿರುದ್ಧವಾಗಿದ್ದು ಇದಕ್ಕೆ ಇಸ್ಲಾಮಿನಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಸ್ಪಷ್ಟಪಡಿಸಿದೆ.

"ಸೂರ್ಯ ನಮಸ್ಕಾರ" ರಹಿತ ಯೋಗಕ್ಕೆ ಇಸ್ಲಾಮಿನಲ್ಲಿ ಅಡ್ಡಿಯಿಲ್ಲ. ಯೋಗವು ಒಂದು ರೀತಿಯ ವ್ಯಾಯಾಮವಾಗಿದ್ದು ಅದನ್ನು ಧಾರ್ಮಿಕತೆಯೊಂದಿಗೆ ಸೇರಿಸುವುದು ಸರಿಯಲ್ಲ. ಹಾಗೂ ಅದನ್ನು ಯಾರ ಮೇಲೂ ಒತ್ತಾಯವಾಗಿ ಹೇರಬಾರದು. ಬಲವಂತದ ಯೋಗಾಚರಣೆಯನ್ನು ಕಟುವಾಗಿ ವಿರೋಧೀಸುವುದಲ್ಲದೆ, ಅಂತಹ ಬೆಳವಣೆಗೆಗಳು ಎಲ್ಲಾದರು ಕಂಡುಬಂದಲ್ಲಿ ಅವುಗಳ ವಿರುದ್ಧ ಕಾನೂನು ಹೋರಾಟಕ್ಕೂ ಎಸ್ಕೆಎಸ್ಸೆಸ್ಸೆಫ್ ಸಿದ್ಧವಾಗಿದೆ ಎಂದು ರಾಜ್ಯ ಸಮಿತಿಯ ಅಧ್ಯಕ್ಷ, ವಿ.ಎಂ. ಅನೀಸ್ ಕೌಸರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News