ಡಕಾಯಿತಿ ಪ್ರಕರಣ: ಮೂವರ ಬಂಧನ ಪರಾರಿಯಾದವರ ಪತ್ತೆಗೆ ಪೊಲೀಸರ ಶೋಧ
Update: 2016-05-20 21:45 IST
ಶಿವಮೊಗ್ಗ, ಮೇ 20: ಇತ್ತೀಚೆಗೆ ನಗರದಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಮೊಬೈಲ್, ನಗದು ದೋಚಿ ಪರಾರಿಯಾಗಿದ್ದ ಆರು ಜನರ ತಂಡದ ಮೂವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ವರದಿಯಾಗಿದೆ. ಶರಾವತಿ ನಗರದ ನಿವಾಸಿ ಸಾಯಿಕುಮಾರ್ (23), ಪ್ರದೀಪ್ (19) ಹಾಗೂ ಕೋತಿ ರಘು (19) ಬಂಧಿತ ಆರೋಪಿಗಳು. ಸಬ್ ಇನ್‌ಸ್ಪೆಕ್ಟರ್ ಎ.ಎಸ್.ರವಿ ನೇತೃತ್ವದ ಪೊಲೀಸ್ ತಂಡ ನವುಲೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಲೆಮರೆಸಿಕೊಂಡಿರುವ ಇತರೆ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ .