‘ಆಕಾಶವಾಣಿ ಫೋನ್-ಇನ್’ನಲ್ಲಿ ಇಂದು ಸಿಎಂ ಸಿದ್ದರಾಮಯ್ಯ
Update: 2016-05-20 23:40 IST
ಬೆಂಗಳೂರು, ಮೇ 20: ರಾಜ್ಯ ಸರಕಾರವು ಮೂರು ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಆಕಾಶವಾಣಿ ಬೆಂಗಳೂರು ಕೇಂದ್ರವು ಮೇ 21ರಂದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ‘ನೇರ ಫೋನ್-ಇನ್’ ಕಾರ್ಯಕ್ರಮವನ್ನು ಆಯೋಜಿಸಿದೆ. ಶನಿವಾರ ರಾತ್ರಿ 7:45ರಿಂದ 8:42ರ ವರೆಗೆ ನಡೆಯ ಲಿರುವ ಈ ನೇರ ಫೋನ್ - ಇನ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೋತೃಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಆಕಾಶವಾಣಿಯ ದೂರವಾಣಿ ಸಂಖ್ಯೆಗಳಾದ 080-2237 0477, 2236 0488 ಹಾಗೂ 2237 0488 ಮೂಲಕ ಶ್ರೋತೃಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಂಪರ್ಕಿಸಿ ರಾಜ್ಯ ಸರಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ತಮ್ಮ ಪ್ರಶ್ನೆಗಳನ್ನು ಕೇಳಿ, ಉತ್ತರವನ್ನು ಪಡೆಯಬಹುದು ಎಂದು ಅಧಿಕೃತ ಪ್ರಕಟನೆ ಕೋರಿದೆ.