ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ
Update: 2016-05-21 21:59 IST
ಮೂಡಿಗೆರೆ, ಮೇ 21: ಅಂಗವಿಕಲ ಜೆಎಂ ರಸ್ತೆ ನಿವಾಸಿ ಎಜಾಝ್ ಬೇಗ್ ಎಂಬವರಿಗೆ ಇಲ್ಲಿನ ಪಪಂಯಿಂದ ತ್ರಿಚಕ್ರ ವಾಹನವನ್ನು ಕಚೇರಿ ಆವರಣದಲ್ಲಿ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷ ಮದೀಶ್ ಕೀಲಿಕೈ ನೀಡುವ ಮೂಲಕ ವಿತರಣೆ ಮಾಡಿದರು. ಈ ವೇಳೆ ಉಪಾಧ್ಯಕ್ಷ ಮದೀಶ್ ಮಾತನಾಡಿ, ಅಂಗವಿಕಲರಿಗೆ ಎಸ್‌ಎಫ್‌ಸಿ ಶೇ. 3ರ ಯೋಜನೆಯಲ್ಲಿ ತ್ರಿಚಕ್ರ ವಾಹನ ನೀಡಲಾಗಿದೆ. ಈ ಯೋಜನೆಯಲ್ಲಿ ಇಬ್ಬರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಸರಕಾರದ ಯೋಜನೆಯನ್ನು ಸೂಕ್ತ ಫಲಾನುಭವಿಗಳು ಪಡೆದು. ಚಾಲನಾ ಪರವಾನಿಗೆ ಪಡೆದು ನಿಯಮ ಬದ್ಧವಾಗಿ ಚಾಲನೆ ಮಾಡಬೇಕು ಎಂದರು.
ಈ ವೇಳೆ ಪಪಂ ಸದಸ್ಯರಾದ ರಾಮಕೃಷ್ಣ, ನಯನ ಲೋಕಪ್ಪಗೌಡ, ಲತಾಲಕ್ಷ್ಮಣ್, ಪೂರ್ಣಿಮಾ ಮಲ್ಯ, ರಮೇಶ್, ಷಣ್ಮುಖಾನಂದ, ಮುಖ್ಯಾಧಿಕಾರಿ ಎಚ್.ಟಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.