×
Ad

ಸಾಗರ: ಸಫಾ ಬೈತುಲ್ ಮಾಲ್‌ನಿಂದ ಮನೆ ಹಸ್ತಾಂತರ

Update: 2016-05-21 22:16 IST

ಸಾಗರ, ಮೇ 21: ಇಲ್ಲಿನ ಸಫಾ ಬೈತುಲ್ ಮಾಲ್ ಸ್ಥಳೀಯ ಶಾಖೆ ವತಿಯಿಂದ ರಾಮನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬವೊಮದಕ್ಕೆ ಉಚಿತವಾಗಿ ಮನೆ ನಿರ್ಮಿಸಿ ಹಸ್ತಾಂತರಿಸಲಾಯಿತು.

ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮನೆಯನ್ನು ಶುಕ್ರವಾರ ಸಫಾ ಬೈತುಲ್ ಮಾಲ್ ಅಧ್ಯಕ್ಷ ಮೌಲಾನಾ ಕಲೀಮುಲ್ಲಾ ಹಸ್ತಾಂತರಿಸಿ ಬಳಿಕ ಮಾತನಾಡುತ್ತಾ, ಮುಸ್ಲಿಂ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬವನ್ನು ಗುರುತಿಸಿ, ಅವರಿಗೆ ಆರ್ಥಿಕ ಸಹಕಾರ ಕಲ್ಪಿಸುವ ಕೆಲಸ ಮಾಡಬೇಕೆಂದರು.

ಅಲ್ಲದೆ, ಎಸೆಸೆಲ್ಸಿಯಲ್ಲಿ ಉತ್ತೀರ್ಣ ರಾದ ಬಡ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಾಯಧನವನ್ನು ಇದೇ ವೇಳೆ ವಿತರಿಸಲಾಗುವುದು ಎಂದರು.

ಸಮಾಜದ ಎಲ್ಲ ಕುಟುಂಬಗಳು ಆರ್ಥಿಕವಾಗಿ, ಸಮಾಜಿಕವಾಗಿ ಸದೃಢಗೊಳ್ಳಬೇಕು ಎನ್ನುವ ಉದ್ದೇಶದಿಂದ ಬಡ ಕುಟುಂಬಗಳಿಗೆ ಶೌಚಾಲಯ ನಿರ್ಮಾಣ, ಮನೆ ನಿರ್ಮಾಣದಂತಹ ಸಮಾಜಮುಖಿ ಕೆಲಸವನ್ನು ನಮ್ಮ ಸಂಸ್ಥೆ ವತಿಯಿಂದ ನಡೆಸಿಕೊಡಲಾಗುತ್ತಿದೆ. ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ನೀಡುವ ಜೊತೆಗೆ ಹೊಲಿಗೆ ಯಂತ್ರಗಳನ್ನೂ ವಿತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಂದರ್ಭದಲ್ಲಿ ಆಝಾದ್ ಮಸೀದಿಯ ಅಧ್ಯಕ್ಷ ಸೈಯದ್ ಮುನಾವರ್ ಸಾಬ್, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಬಿ.ನೂರುದ್ದೀನ್, ಮಕ್ಬೂಲ್ ಅಹ್ಮದ್, ಹಾಫಿಝ್ ಶಫೀವುಲ್ಲಾ, ನೂರ್ ಅಹ್ಮದ್, ಇರ್ಷಾದ್ ಬೇಗ್, ಶಫೀಯುಲ್ಲಾ, ಅಬ್ದುಲ್ ರಹೀಂ, ಕೆ.ಭಾಷಾ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News