×
Ad

ಬಿಸಿಲ ಬೇಗೆಗೆ ಕರಗುವ ರಸ್ತೆ, ಜನ ಕಂಗಾಲು

Update: 2016-05-22 20:23 IST

ಹೊಸದಿಲ್ಲಿ, ಮೇ 22: ಭಾರತದ ವಿವಿಧ ಭಾಗಗಳಲ್ಲಿ ರಣ ಬಿಸಿಲಿನ ಕಾರಣದಿಂದಾಗಿ ಡಾಂಬಾರು ರಸ್ತೆಗಳು ಕರಗತೊಡಗಿದೆ, ಜನ ಕಂಗಾಲಾಗಿದ್ದಾರೆ. ರಸ್ತೆಯಲ್ಲಿ ಕಾಲಿಟ್ಟರೆ ಶೂ, ಚಪ್ಪಲಿಗಳು ಡಾಂಬಾರ್‌ನಲ್ಲಿ ಅಂಟಿಕೊಂಡು ಜನಸಾಮಾನ್ಯರು ಒದ್ದಾಡುವಂತಾಗಿದೆ.

     ರಾಜಸ್ಥಾನದ ಚುರು ಮತ್ತು ಗಂಗಾನಗರಲ್ಲಿ ತಾಪಮಾನ 49.2 ಸೆಲ್ಸಿಯಸ್‌ಗೆ ಮುಟ್ಟಿದೆ. ವಿದರ್ಭ, ಜಮ್ಮು -ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಉಷ್ಣಾಂಶ ಏರಿದೆ. ದಿಲ್ಲಿಯಲ್ಲಿ ಶನಿವಾರ ದಿನದ ತಾಪವಾನ 41.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor