ಮೋದಿ ಇರಾನ್ ಪ್ರವಾಸ ಆರಂಭ
Update: 2016-05-22 23:49 IST
ಎರಡು ದಿನಗಳ ಇರಾನ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ರವಿವಾರ ಟೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರಿಗೆ ಕೆಂಪುಗಂಬಳಿಯ ಸ್ವಾಗತ ನೀಡಲಾಯಿತು. ಬಳಿಕ ಮೋದಿ ಟೆಹ್ರಾನ್‌ನಲ್ಲಿ ಇರಾನ್‌ನ ವಿತ್ತ ಸಚಿವ ಅಲಿ ತಯಿಬ್ನಿಯ ಜೊತೆ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಟೆಹ್ರಾನ್‌ನಲ್ಲಿರುವ ಭಾಯಿ ಗಂಗಾ ಸಿಂಗ್ ಸಭಾ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.