×
Ad

28ರಿಂದ ಧಾರವಾಡದಲ್ಲಿ ‘ಮೇ ಸಾಹಿತ್ಯ ಮೇಳ’

Update: 2016-05-22 23:56 IST

ಬೆಂಗಳೂರು, ಮೇ 22: ‘ಸಮಕಾಲೀನ ಸವಾಲುಗಳು: ಹೊಸ ತಲೆಮಾರಿನ ಪ್ರತಿಸ್ಪಂದನೆ’ ಎಂಬ ಘೋಷಣೆಯೊಂದಿಗೆ ಗದಗದ ಲಡಾಯಿ ಪ್ರಕಾಶನ ಮೇ 28ರಿಂದ ಎರಡು ದಿನಗಳ ಕಾಲ ‘ಮೇ ಸಾಹಿತ್ಯ ಮೇಳ’ವನ್ನು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಪಟಿಯಾಲದ ಚಿಂತಕ ಪ್ರೊ.ಚಮನ್ ಲಾಲ್ ಸಾಹಿತ್ಯ ಮೇಳ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹೊಸದಿಲ್ಲಿ ಜೆಎನ್‌ಯು ಪ್ರಾಧ್ಯಾಪಕ ಪ್ರೊ.ಪುರುಷೋತ್ತಮ ಬಿಳಿಮಲೆ, ಭಾಷಾತಜ್ಞ ಪ್ರೊ.ಗಣೇಶ್ ಎನ್. ದೇವಿ, ಡಾ.ಶಿವರುದ್ರ ಕಲ್ಲೊಳಿಕರ, ವೆಂಕಟೇಶಯ್ಯ, ಶಶಿಧರ ತೋಡ್ಕರ, ಜೆ. ಭಾರದ್ವಾಜ್, ವಿಠ್ಠಪ್ಪ ಗೋರಂಟ್ಲಿ, ಆರ್. ಎಚ್.ಆಯಿ, ಸದಾನಂದ ಮೋದಿ, ರಾಚಪ್ಪ ಹಡಪದ, ಎ ಬಿ.ಹಿರೇಮಠ, ಸಂಗಮೇಶ ಮೆಣಸಿನಕಾಯಿ ಹಾಗೂ ಡಾ.ಎಚ್.ಎಸ್.ಅನುಪಮಾ ಪಾಲ್ಗೊಳ್ಳಲಿದ್ದಾರೆ.
ಗೀತೆ; ಒಳಗಿನ ಸತ್ಯ ಎನು?, ದಲಿತ ಸಂವೇದನೆ, ಬ್ರಾಹ್ಮಣವಾದಿ ಭಾರತ ವಿ/ಎಸ್ ದಲಿತ ಭಾರತ, ಮಾಂಸದಂಗಡಿಯ ನವಿಲು, ಮನುಸ್ಮತಿ: ಅಪರಾಧ-ಶಿಕ್ಷೆ, ಅಸ್ಪಶ್ಯತೆ: ವೈಕಂ ಹೋರಾಟ ಚರಿತ್ರೆ ಹಾಗೂ ಬಿಟಿ ಹತ್ತಿ: ರೈತರ ಕೊರಳ ಕುಣಿಕೆ ಬಿಗಿಗೊಳಿಸಿದ ಬೆಳೆ ಸೇರಿದಂತೆ 16 ಕೃತಿಗಳನ್ನು ಪ್ರೊ.ಶ್ರೀಕಂಠ ಕೂಡಿಗೆ ಲೋಕಾರ್ಪಣೆ ಮಾಡಲಿದ್ದಾರೆ.
ಹೊಸ ತಲೆಮಾರಿನ ಸಾಹಿತ್ಯ ಸ್ಪಂದನ: ಗೋಷ್ಠಿಯಲ್ಲಿ ಮುಂಬೈನ ಯುವ ಲೇಖಕ ರೆಹಮಾನ್ ಅಬ್ಬಾಸ್ ಆಶಯ ಮಾತುಗಳನ್ನು ಆಡಲಿದ್ದು, ಪಿ.ಭಾರತಿದೇವಿ- ಕಾವ್ಯ, ಕತೆ/ಕಾದಂಬರಿ: ಎಸ್.ಗಂಗಾಧರಯ್ಯ, ವೈಚಾರಿಕ ಬರಹ: ಬಿ.ಪೀರ್ ಭಾಷಾ, ಮಾಧ್ಯಮ: ಡಿ.ಉಮಾಪತಿ, ಸಾಮಾಜಿಕ ಅಂತರ್ಜಾಲ: ಚೇತನಾ ತೀರ್ಥಹಳ್ಳಿ ಮಾತನಾಡಲಿದ್ದು, ಡಾ.ಕಾಳೇಗೌಡ ನಾಗವಾರ, ಅರುಣ್ ಜೋಳದ ಕೂಡ್ಲಿಗಿ, ಪ್ರಮೋದ ತುರ್ವಿಹಾಳ ಪಾಲ್ಗೊಳ್ಳಲಿದ್ದಾರೆ.
‘ಸಮಕಾಲೀನ ಸವಾಲುಗಳು: ನನ್ನ ಅಭಿವ್ಯಕ್ತಿ’ ಗೋಷ್ಠಿಯಲ್ಲಿ ಬಿ.ತಾರಕೇಶ್ವರ ಆಶಯ ಮಾತುಗಳನ್ನು ಆಡಲಿದ್ದು, ಶಾರ್ಟ್ ಫಿಲ್ಮ್: ಬಿ.ಎಸ್.ದಿವಾಕರ್, ನಾಟಕ: ಎಂ.ವಿ.ಪ್ರತಿಭಾ, ಸಿನೆಮಾ: ಟಿ.ಕೆ.ದಯಾನಂದ ಮಾತನಾಡಲಿದ್ದು, ಸದಾಶಿವ ಮರ್ಜಿ, ಜ್ಯೋತಿ ಹಿಟ್ನಾಳ, ಪಂಪಾರೆಡ್ಡಿ ಆರಳಹಳ್ಳಿ ಪಾಲ್ಗೊಳ್ಳಲಿದ್ದಾರೆ.
 ಮೇ 29ರಂದು ‘ಸಮಕಾಲೀನ ಸವಾಲುಗಳು ಮತ್ತು ವಿದ್ಯಾರ್ಥಿ ಚಳವಳಿ’ ಕುರಿತು ಹೊಸದಿಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶಹ್ಲಾ ರಶೀದ್ ಆಶಯ ಮಾತುಗಳನ್ನು ಆಡಲಿದ್ದು, ಹೈದರಾಬಾದ್ ವಿವಿ ಶ್ರೀಕಾಂತ, ತಮಿಳುನಾಡಿನ ದಿನೇಶ್ ಸೀರಂಗರಾಜ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿ ಸಂಘಟನೆಗಳ ಮುಖಂಡರಾದ ಗುರುರಾಜ ದೇಸಾಯಿ, ಹರಿರಾಮ, ರಾಜಶೇಖರ, ಸಂತೋಷ್, ಮಹೇಶ್ ಹಾಗೂ ಮಾರುತಿ ಭಾಗವಹಿಸಲಿದ್ದಾರೆ.
ಅದೇ ದಿನ ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ತೆಲುಗು ಲೇಖಕ ರಾಣಿ ಶಿವಶಂಕರ ಶರ್ಮಾ, ಮಾಲತಿ ಪಟ್ಟಣಶೆಟ್ಟಿ. ಕೆ.ನೀಲಾ, ಚಾಮರಾಜ ಬಾಂಗಿ, ಬಿ.ಎಸ್.ಸೊಪ್ಪಿನ, ಶಂಕರಗೌಡ ಸಾತ್ಮರ, ದೇವಾನಂದ ಜಗಾಪುರ ಹಾಗೂ ಡಿ.ಎಚ್.ಪೂಜಾರ ಪಾಲ್ಗೊಳ್ಳಲಿದ್ದಾರೆಂದು ಲಡಾಯಿ ಪ್ರಕಾಶನದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News