×
Ad

ಹಾಸನ ಮೆಡಿಕಲ್ ಕಾಲೇಜು ಹಾಸ್ಟೆಲಿನಲ್ಲಿ ಮಾಂಸಾಹಾರಿ ವಿದ್ಯಾರ್ಥಿಗಳಿಗೊಂದು ಅಲಿಖಿತ ನಿಯಮ !

Update: 2016-05-23 17:18 IST

ಹಾಸನ : ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ನಡೆಸುವ ಹಾಸನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಂನ್ಸಸ್ ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳು ಕಳೆದ ಶುಕ್ರವಾರ ತಮ್ಮ ರಾತ್ರಿಭೋಜನವನ್ನು ಹಾಸ್ಟೆಲ್ ಕಟ್ಟಡದ ಹೊರಗೆ ಕುಳಿತು ಸವಿದರು. ಕಾರಣವಿಷ್ಟೇ ಆ ದಿನ ಅವರಿಗೆ ಕೋಳಿ ಪದಾರ್ಥವನ್ನು ತಯಾರಿಸಲಾಗಿತ್ತು. ಈ ಹಾಸ್ಟೆಲ್ಲಿನಲ್ಲಿರುವ ಒಂದು ಅಲಿಖಿತ ಪದ್ಧತಿಯೆಂದರೆ, ಮಾಂಸಾಹಾರಿ ಪದಾರ್ಥ ತಯಾರಿಸಿದ ದಿನ ಮಾಂಸಾಹಾರಿ ವಿದ್ಯಾರ್ಥಿಗಳು ಹೊರಗೆ ಕುಳಿತೇ ಆಹಾರ ಸೇವಿಸುವುದು.

ಕೋಳಿ ಪದಾರ್ಥವನ್ನುತಯಾರಿಸಿದ್ದ ಅಡುಗೆಯಾಳುಗಳು ಪದಾರ್ಥವಿರುವ ಪಾತ್ರೆಗಳನ್ನುಹಾಗೂ ಅನ್ನವನ್ನು ಕಟ್ಟಡದ ಹೊರಗಿಟ್ಟರೆ, ವಿದ್ಯಾರ್ಥಿಗಳು ತಾವೇ ಬಡಿಸಿಕೊಂಡು ಅಲ್ಲಿಯೇ ಕುಳಿತು ತಿನ್ನುತ್ತಾರೆ. ‘‘ಈ ಪದ್ಧತಿ ಯಾವಾಗ ಆರಂಭವಾಯಿತು ಎಂಬುದು ನಮಗೆ ತಿಳಿದಿಲ್ಲ. ನಮ್ಮ ಹಿರಿಯ ವಿದ್ಯಾರ್ಥಿಗಳೂ ಹೀಗೆಯೇ ಮಾಡುತ್ತಿದ್ದರು. ನಾವು ಅವರನ್ನು ಹಿಂಬಾಲಿಸುತ್ತಿದ್ದೇವೆ ಹಾಗೂ ಈ ಪದ್ಧತಿಯನ್ನು ಯಾವತ್ತೂ ಪ್ರಶ್ನಿಸಿಲ್ಲ,’’ ಎಂದು ವಿದ್ಯಾರ್ಥಿಯೊಬ್ಬ ಹೇಳುತ್ತಾನೆ.

ಹಾಸ್ಟೆಲ್ಲಿನಲ್ಲಿ ಒಟ್ಟು 250 ವಿದ್ಯಾರ್ಥಿಗಳಿದ್ದರೆ ಅವರಲ್ಲಿ ಸುಮಾರು 150 ಮಂದಿ ಮಾಂಸಾಹಾರಿಗಳಾಗಿದ್ದಾರೆ. ‘‘ಮಾಂಸಾಹಾರ ಯಾವುದೇ ನಿರ್ದಿಷ್ಟ ದಿನದಂದು ನಾವು ಒದಗಿಸುವುದಿಲ. ಮೆಸ್ ಕಮಿಟಿಯ ಶಿಫಾರಸಿನಂತೆ ತಿಂಗಳಿಗೆ ಎರಡು ಬಾರಿ ವಿದ್ಯಾರ್ಥಿಗಳಿಗಾಗಿ ಕೋಳಿ ಪದಾರ್ಥತಯಾರಿಸುತ್ತಾರೆ,’’ಎಂದೂ ಆತ ವಿವರಿಸುತ್ತಾನೆ. ಹಾಸ್ಟೆಲ್ಲಿನ ವಾರ್ಡನ್ ಮೆಸ್ ಕಾರ್ಯನಿರ್ವಹಣೆಯ ಉಸ್ತುವಾರಿ ಹೊತ್ತುಕೊಂಡಿದ್ದಾರೆ.

‘‘ಹಾಸ್ಟೆಲ್ಲಿನ ಅಡುಗೆ ಕೋಣೆಯಲ್ಲಿ ಮಾಂಸಾಹಾರ ಪದಾರ್ಥ ತಯಾರಿಸಲು ಯಾವುದೇ ನಿರ್ಬಂಧವಿಲ್ಲದೇ ಇದ್ದರೂ ಅದನ್ನು ಡೈನಿಂಗ್ ಹಾಲ್ ನಲ್ಲಿ ವಿದ್ಯಾರ್ಥಿಗಳಿಗೆ ಬಡಿಸಲಾಗುವುದಿಲ್ಲ. ಪ್ರಾಯಶಃ ನಮ್ಮ ಹಿರಿಯ ವಿದ್ಯಾರ್ಥಿಗಳು ಸಸ್ಯಾಹಾರಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಹೀಗೆ ಮಾಡಿರಬಹುದು,’’ ಎಂದು ಇನ್ನೊಬ್ಬ ವಿದ್ಯಾರ್ಥಿ ಅಭಿಪ್ರಾಯ ಪಡುತ್ತಾನೆ.

ಕೆಲವು ವಿದ್ಯಾರ್ಥಿಗಳಿಗೆ ಈ ಪದ್ಧತಿ ವಿಚಿತ್ರವೆನಿಸಿದರೂಅವರು ಅದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ‘‘ನಮಗೆ ಮಾಂಸಾಹಾರ ಪದಾರ್ಥವನ್ನು ಹಾಸ್ಟೆಲ್ ಒಳಗೆ ಸೇವಿಸಲು ಅನುಮತಿಯಿಲ್ಲದೇ ಇರುವುದರಿಂದ ಒಂದು ರೀತಿಅವಮಾನಕರವೆನಿಸುತ್ತದೆ. ಆದರೆ ನಾವು ಯಾವುದೇ ವಿವಾದಕ್ಕೆ ಆಸ್ಪದ ನೀಡದೆ ನಮ್ಮ ಕೋರ್ಸ್ ಮುಗಿಸಿ ಹೋಗಬಯಸತ್ತೇವೆ,’’ಎಂದು ಈವಿದ್ಯಾರ್ಥಿಗಳು ಹೇಳುತ್ತಾರೆ.

ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಹಾಗೂ ಬಯೋಕೆಮಿಸ್ಟ್ರಿ ವಿಭಾಗದ ಸಹಾಯಕ ಪ್ರೊಫೆಸರ್ ಕಾಂತಯ್ಯನವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು : ‘‘ಹಾಸ್ಟೆಲ್ ಡೈನಿಂಗ್ ಹಾಲ್ ನಲ್ಲಿ ಮಾಂಸಾಹಾರ ಸೇವಿಸಲು ಯಾವುದೇ ನಿರ್ಬಂಧವಿಲ್ಲ. ವಿದ್ಯಾರ್ಥಿಗಳು ಅವರಾಗಿಯೇ ಹೊರ ಹೋಗಿ ಸೇವಿಸುತ್ತಾರೆ.’’ ’’ನಾವೇನು ಈ ನಿಟ್ಟಿನಲ್ಲಿ ಯಾವುದೇ ಆದೇಶ ನೀಡಿಲ್ಲ,’’ ಎನ್ನುತ್ತಾರವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News