×
Ad

ಮೊಗವೀರ ಸಮಾಜ ಶ್ರಮಿಕರ ವರ್ಗ: ಶಂಕರ್

Update: 2016-05-23 22:24 IST

ಸಾಗರ, ಮೇ 23: ಮೊಗವೀರ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಹೆಚ್ಚಿನ ಚಿಂತನೆ ನಡೆಸಬೇಕು. ಸಮರ್ಪಕ ಶಿಕ್ಷಣ ಪಡೆಯದ ಮಕ್ಕಳಿಂದ ಉತ್ತಮ ಸಾಧನೆ ಸಾಧ್ಯವಿಲ್ಲ ಎಂದು ಡಾ. ಜಿ. ಶಂಕರ್ ಹೇಳಿದ್ದಾರೆ.

ಇಲ್ಲಿನ ಮೊಗವೀರ ಸಮುದಾಯ ಭವನದಲ್ಲಿ ರವಿವಾರ ಮೊಗವೀರ ಮಹಾಜನ ಸಂಘ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೊಗವೀರ ಸಮಾಜದ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಬಡ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು. ಮೊಗವೀರ ಸಮಾಜ ಶ್ರಮಿಕವರ್ಗವಾಗಿದೆ. ಕಡಲತಡಿಯಲ್ಲಿ ಮೀನುಗಾರಿಕೆಯಂತಹ ವೃತ್ತಿಯಲ್ಲಿ ತೊಡಗಿಕೊಂಡಿರುವ ಜನಾಂಗ ಆರ್ಥಿಕವಾಗಿ ಸಹ ತೀರ ಹಿಂದುಳಿದಿದೆ. ಬದಲಾದ ದಿನಮಾನಗಳಲ್ಲಿ ಸಮಾಜ ಪ್ರವರ್ಧಮಾನಕ್ಕೆ ಬರುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಮಾಜವನ್ನು ಮುಖ್ಯವಾಹಿನಿಯಲ್ಲಿ ತರುವ ಕೆಲಸ ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು.

ಮೊಗವೀರ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಮೊಗವೀರ ಸಮಾಜದ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಜಯ ಕೋಟ್ಯಾನ್, ಕಾರ್ಯದರ್ಶಿ ರಾಘವೇಂದ್ರ, ಸೀನಣ್ಣ, ನಾರಾಯಣ, ಇಕ್ಕೇರಿ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು. ಮಳ್ಳಡ ಡೇಝಿ ಸೋಮಯ್ಯಗೆ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ಸನ್ಮಾನ ಮಡಿಕೇರಿ. ಮೇ 23: ಇತ್ತೀಚೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ಬ್ಯಾರಿ ಫೆಲೋಶಿಪ್ ಹಾಗೂ ಬ್ಯಾರಿ ಪುರಸ್ಕಾರ ಸಮಾರಂಭ ಮೂಡಬಿದಿರೆಯಲ್ಲಿ ನಡೆಯಿತು.

ಸಮಾರಂಭವನ್ನು ರಾಜ್ಯ ಯುವಜನ ಸೇವಾ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು.

 ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಡಿಕೇರಿ ಆಕಾಶವಾಣಿಯಲ್ಲಿ ಬ್ಯಾರಿ ವಾರ್ತಾ ವಾಚಕಿಯಾಗಿರುವ ಪಾರಾಣೆಯ ಮಳ್ಳಡ ಡೇಝಿ ಸೋಮಯ್ಯ ಅವರನ್ನು ಬ್ಯಾರಿ ಭಾಷೆಯಲ್ಲಿನ ಸಾಧನೆಗಾಗಿ ಸನ್ಮಾನಿಸಲಾಯಿತು.

ಡೇಝಿ ಸನ್ಮಾನ ಸ್ವೀಕರಿಸಿ ಬ್ಯಾರಿ ಭಾಷೆಯಲ್ಲಿಯೇ ಮಾತನಾಡಿದರು.

ಬ್ಯಾರಿ ಫೆಲೊಶಿಪ್ ಕಾರ್ಯಕ್ರಮದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿ ಫಾಹಿಮಾ ಅವರಿಗೆ ಫೆಲೋಶಿಪ್ ನೀಡಲಾಯಿತು.

ಸಮಾರಂಭದಲ್ಲಿ ಮಾಜಿ ಸಚಿವ ಬಿ.ಎ.ಮೊಯ್ದೀನ್, ಬ್ಯಾರಿ ಅಕಾಡಮಿ ಸದಸ್ಯ ಎಂ.ಇ.ಮಹಮ್ಮದ್, ಗುರುಪುರದ ಗಡಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಮಡಿಕೇರಿ ಆಕಾಶವಾಣಿ ಉದ್ಘೋಷಕ ಬಿ.ಎಸ್.ರಫೀಕ್ ಅಹ್ಮದ್, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News