ಅರ್ಜೆಂಟಿನದ ಫುಟ್ಬಾಲ್ ಆಟಗಾರನ ಮೃತ್ಯು

Update: 2016-05-24 05:43 GMT

ಅರ್ಜೆಂಟಿನ, ಮೇ 24: ಸ್ಥಳೀಯ ಫುಟ್‌ಬಾಲ್ ಲೀಗ್‌ನಲ್ಲಿ ಅರ್ಜೆಂಟಿನದ ಫುಟ್‌ಬಾಲ್ ಆಟಗಾರ ಮೈಕೆಲ್ ಫಾವರ್‌ರ ತಲೆಗೆ ಎರಡುಬಾರಿ ಏಟಾದ್ದರಿಂದ ಅವರು ನಿಧನರಾಗಿದ್ದಾರೆ. ಈ ಘಟನೆ ಮೈಕೆಲ್ ಫಾವರ್ ಲೀಗ್ ಡಿಪಾರ್ಟ್‌ಮೆಂಟಲ್ ಡೆ ಕೊಲಾನ್‌ನಲ್ಲಿ ರವಿವಾರ ಡೆಫೆನ್ಸರಸ್‌ನ ತಂಡದ ವಿರುದ್ಧ ಸಾನ್ ಜಾರ್ಜ್ ಪರ ಆಡುತ್ತಿದ್ದಾಗ ನಡೆಯಿತು.

ವೆಬ್‌ಸೈಟ್ ಗೋಲ್ ಡಾಟ್ ಕಾಮ್ ಪ್ರಕಾರ ಫುಟ್‌ಬಾಲ್ ಆಟಗಾರ ಲೆಫ್ಟ್ ಟಚ್‌ಲೈನ್ ಕಡೆಗೆ ಓಡುತ್ತಿದ್ದರು.ಆಗ ಅವರು ಬಿದ್ದರು. ನಂತರ ಅವರ ತಲೆ ಅನಿರೀಕ್ಷಿತವಾಗಿ ಎದುರಾಳಿ ಆಟಗಾರನ ತಲೆಗೆ ಬಡಿಯಿತು. ಆನಂತರ ಇನ್ನೊಬ್ಬ ಆಟಗಾರ ಹೊಡೆದ ಚೆಂಡು ಅವರ ತಲೆಗೆ ಬಡಿದಿತ್ತು. ಆನಂತರ ಅವರು ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವ ಮಧ್ಯೆ ಅವರು ಮೃತರಾಗಿದ್ದಾರೆ ಎಂದು ವರದಿಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News