×
Ad

ಕುರುಬರ ಹಿತರಕ್ಷಣಾ ವೇದಿಕೆ ಉದ್ಘಾಟನೆ

Update: 2016-05-24 22:27 IST

ಕುಶಾಲನಗರ, ಮೇ 24: ಕೂಡಿಗೆಯ ರಾಮೇಶ್ವರ ರೈತ ಸಹಕಾರಿ ಭವನದಲ್ಲಿ ಸಂಗೊಳ್ಳಿರಾಯಣ್ಣ ಕುರುಬರ ಹಿತ ರಕ್ಷಣಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಟ್ಟಡ ನಿರ್ಮಾಣ ಮತ್ತು ಇತರೆ ಕಟ್ಟಡ ನಿರ್ಮಾಣ ಕಾರ್ಮಿಕ ಮಂಡಳಿಯ ರಾಜ್ಯ ನಿರ್ದೇಶಕ ನಾಪಂಡ ಮುತ್ತಪ್ಪ ನೆರವೇರಿಸಿ ಮಾತನಾಡಿ, ಸಮುದಾಯದಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸಬಲೀಕರಣಗೊಳ್ಳಲು ಇಂತಹ ಸಂಘಟನೆಗಳು ಮುಖ್ಯವಾಗಿರುತ್ತವೆ ಎಂದರು.

ಮುಖ್ಯ ಅತಿಥಿ ಮಡಿಕೇರಿ ಕ್ಷೇತ್ರ ವಿಧಾನಸಭಾ ಶಾಸಕ ಅಪ್ಪಚ್ಚುರಂಜನ್ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸಮಾಜದ ಹೊಣೆ ಅದರ ಬೆಳವಣಿಗೆಗೆ ಮತ್ತು ಸಮುದಾಯದಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸುವುದರ ಜೊತೆಗೆ ಶೈಕ್ಷಣಿಕ ವಿಚಾರಗಳನ್ನು ಸಮುದಾಯದ ಮೂಲಕ ಚಿಂತಿಸಿ, ಸಮಾಜದ ಬೆಳವಣಿಗೆಗೆ ತಾವು ತಮ್ಮನ್ನು ತೊಡಗಿಸಿಕೊಳ್ಳುವುದು ಮುಖ್ಯ ಎಂದರು. ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಪಿರಿಯಾಪಟ್ಟಣ ಕುರುಬ ಸಮಾಜದ ಅಧ್ಯಕ್ಷ ಅಪ್ಪಾಜಿ ಗೌಡ, ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಕೆ.ಕೆ.ಬೋಗಪ್ಪ ಮಾತನಾಡಿದರು.

ಸಂಗೊಳ್ಳಿರಾಯಣ್ಣನವರ ವಿಚಾರವಾಗಿ ಕೊಪ್ಪಳದ ಸಾಹಿತಿ ಕೆ.ಟಿ ಬೆಟಗೇರಿ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಸಂಗೊಳ್ಳಿರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಸಂತ್ ವಹಿಸಿದ್ದರು. ಈ ಸಂದರ್ಭ ತಾಪಂ ಹಾಗೂ ಗ್ರಾಪಂನಲ್ಲಿ ಸಮುದಾಯದ ಅಭ್ಯರ್ಥಿಗಳು ವಿಜೇತರಾದವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಿರಿಯಾಪಟ್ಟಣದ ಕುರುಬರ ಸಂಘದ ಕಾರ್ಯದರ್ಶಿ ರಾಜೇಗೌಡ, ವಾಲ್ನೂರು ತ್ಯಾಗತ್ತೂರು ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ, ಆಡಳಿತ ಮಂಡಳಿಯ ಗೌರವಾಧ್ಯಕ್ಷ ಕೆ.ಕೆ.ದೊಡ್ಡಯ್ಯ, ಹಿರಿಯ ಕಾರ್ಯಧ್ಯಕ್ಷ ಸಿ.ಕೆ.ಉದಯ್‌ಕುಮಾರ್, ಉಪಾಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ಮಂಜುನಾಥ್, ಸಹಕಾರ್ಯದರ್ಶಿ ಭರಮಣ್ಣ ಬಿ. ಬೆಟ್ಟಗೇರಿ, ಖಜಾಂಚಿ ಡಿ.ಆರ್.ಪ್ರಭಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಭರವಣ್ಣ ನಿರೂಪಿಸಿ, ಪ್ರಭಾಕರ್ ಸ್ವಾಗತಿಸಿ, ವಸಂತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News