ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದ.ಕ ಪ್ರಥಮ, ಉಡುಪಿ ದ್ವಿತೀಯ , ಕೊಡಗು ತೃತೀಯ
Update: 2016-05-25 11:08 IST
ಬೆಂಗಳೂರು, ಮೇ 25: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಫಲಿತಾಂಶದಲ್ಲಿ ಮೊದಲ ಸ್ಥಾನ ಗಳಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ‍್ ಇಂದು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು.
ದಕ್ಷಿಣ ಕನ್ನಡ (ಶೇ 90.48) ಪ್ರಥಮ, ಉಡುಪಿ (ಶೇ .90.35) ದ್ವಿತೀಯ ಮತ್ತು ಕೊಡಗು (ಶೇ 79.35) ತೃತೀಯ ಸ್ಥಾನ ಗಳಿಸಿದೆ. ಯಾದಗಿರಿ ಕೊನೆಯ ಸ್ಥಾನ ಗಳಿಸಿದೆ.ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ ಎಂದು ಸಚಿವ ರತ್ನಾಕರ ಮಾಹಿತಿ ನೀಡಿದ್ದಾರೆ.
ಫಲಿತಾಂಶವನ್ನು ಈ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು: http://karresults.nic.in, www.pue.kar.nic.in.