×
Ad

91ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ

Update: 2016-05-25 12:08 IST

ಬೆಂಗಳೂರು, ಮೇ 25: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ರಾಜ್ಯಕ್ಕೆ ಶೇ 57.20 ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ  ಇದು  ಶೇ. 3 ರಷ್ಟು  ಕಡಿಮೆಯಾಗಿದೆ. ರಾಜ್ಯದಲ್ಲಿ 6,36, 368 ವಿದ್ಯಾರ್ಥಿಗಳಲ್ಲಿ 3,64,013 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಫಲಿತಾಂಶದಲ್ಲಿ ಬಾಲಕರಿಗಿಂತ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

ಈ ಬಾರಿ 91 ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿದೆ
 www.karresults.nic.in ಮತ್ತು www.puc.kar.nic.in ವೆಬ್‌ಸೈಟ್‌ಗಳಲ್ಲಿ ಫ‌ಲಿತಾಂಶ ಲಭ್ಯವಾಗಲಿದೆ 

ಅನುತ್ತೀರ್ಣಗೊಂಡವರಿಗೆ ಜುಲೈ 1ರಿಂದ 13ರ ತನಕ ಪೂರಕ ಪರೀಕ್ಷೆ  ನಿಗದಿಯಾಗಿದೆ.

ಫಲಿತಾಂಶದ ಬಗ್ಗೆ ಒಂದಿಷ್ಟು......

ಒಟ್ಟು ಉತ್ತೀರ್ಣ            ಶೇ 57.20
ಪರೀಕ್ಷೆಗೆ ಹಾಜರಾದವರು  6,36, 368
ಉತ್ತೀರ್ಣ                     3,64,013 
ಅನುತ್ತೀರ್ಣ                   2,72,355

 ಡಿಸ್ಟಿಂಕ್ಷನ್ : 41,373 
ಪ್ರಥಮ ಶ್ರೇಣಿ :1,89,791 
ದ್ವಿತೀಯ ಶ್ರೇಣಿ :78,301 
ತೃತೀಯ ಶ್ರೇಣಿ :54,548

ಅಗ್ರಸ್ಥಾನ ಪಡೆದವರು
ವಿಜ್ಞಾನ  ವಿಭಾಗ -ರಕ್ಷಿತಾ ತಮನ್‌  (596 ಅಂಕ) - ಸರ್ದಾರ್ ಪಟೇಲ್ ಪಿಯು ಕಾಲೇಜು ಬೆಂಗಳೂರು  .

ವಾಣಿಜ್ಯ ವಿಭಾಗ  - ಸಹನಾ ಕುಲಕರ್ಣಿ (594 ಅಂಕ) - ವಿ.ಬಿ. ದರ್ಬಾರ್‌ ಪಿಯು ಕಾಲೇಜು ವಿಜಾಪುರ

ಕಲಾ ವಿಭಾಗ-  ಪಿ. ಅನಿತಾ  ಬಸಪ್ಪ  (594 ಅಂಕ) ಇಂದೂ ಸ್ವತಂತ್ರ ಪಿಯು ಕಾಲೇಜು ಕೊಟ್ಟೂರು ಬಳ್ಳಾರಿ  


ಮೊದಲ ಸ್ಥಾನ –ದಕ್ಷಿಣ ಕನ್ನಡ  ಜಿಲ್ಲೆ  ಶೇ.90.48
ಎರಡನೇ ಸ್ಥಾನ –ಉಡುಪಿ ಜಿಲ್ಲೆ  ಶೇ.90.35
ಮೂರನೇ ಸ್ಥಾನ –ಕೊಡಗು ಜಿಲ್ಲೆ  ಶೇ.79.35
ಕೊನೆಯ  ಸ್ಥಾನ –ಯಾದಗಿರಿ ಜಿಲ್ಲೆ  ಶೇ. 44.16

*ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂ. 7ಕ್ಕೆ ಕೊನೆಯ ದಿನಾಂಕ
*ಸ್ಕ್ಯಾನಿಂಗ್ ಪ್ರತಿ  ಪಡೆಯಲು 400 ರೂ.
*ಸ್ಕ್ಯಾನಿಂಗ್ ಪ್ರತಿಗೆ  ಅರ್ಜಿ ಸಲ್ಲಿಸಲು ಮೇ 30 ಕೊನೆಯ ದಿನಾಂಕ 

*ಪರೀಕ್ಷಾ ಶುಲ್ಕ ಕಟ್ಟಲು ಜೂನ್ 6 ಕೊನೆಯ ದಿನಾಂಕ

*ಜುಲೈ 1 ರಿಂದ 13 ರವರೆಗೆ ಪೂರಕ ಪರೀಕ್ಷೆ
*ಪೂರಕ ಪರೀಕ್ಷೆ ಕಟ್ಟಲು ಒಂದು ವಿಷಯಕ್ಕೆ  101 ರೂ.
*ಮೂರು ವಿಷಯಕ್ಕೆ 301 ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News