ತುಮಕೂರು: ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಬೆಂಗಳೂರು.ಮೇ.25: ತುಮಕೂರು ಮೂಲದ ದಲಿತ ಯುವತಿಯ ಮೇಲೆ ಆಟೋ ಚಾಲಕ ಸೇರಿ ಮೂವರು ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಚಿಕ್ಕಬಳ್ಳಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.
ಸುಮಾರು 20ವರ್ಷ ವಯಸ್ಸಿನ ಯುವತಿಯ ಮೇಲೆ ಚಿಕ್ಕಬಳ್ಳಾಪುರದ ಆಟೋ ಚಾಲಕ ಗಿರೀಶ,ಆತನ ಸ್ನೇಹಿತರಾದ ಶಿವಕುಮಾರ್, ಶಶಿಧರ್ ಹಾಗೂ ರಮೇಶ್ ಬಾಬುನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಆರೋಪಿ ಆಟೋ ಚಾಲಕ ಗಿರೀಶ್‌ನಿಗೆ ಕೆಲವು ತಿಂಗಳ ಹಿಂದೆ ಮೊಬೈಲ್‌ನಲ್ಲಿ ಸಂತ್ರಸ್ಥ ಯುವತಿಯ ಪರಿಚಯವಾಗಿದ್ದಳು. .ನಿರಂತರವಾಗಿ ಆಕೆಯೊಂದಿಗೆ ಮಾತನಾಡುತ್ತಿದ್ದ ಆರೋಪಿಯು ಆ ಯುವತಿಯನ್ನು ತುಮಕೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕರೆಸಿಕೊಂಡಿದ್ದಾನೆ.
ಆಕೆಯನ್ನು ಭೇಟಿ ಮಾಡಿ ತನ್ನದೇ ಆಟೋದಲ್ಲಿ ಬಸ್ ನಿಲ್ದಾಣದಿಂದ ಊರಿಗೆ ಆರೋಪಿಯ ಬಿಡುವುದಾಗಿ ಆಟೋ ಹತ್ತಿಸಿಕೊಂಡು ಹೊರಟಿದ್ದು ಸ್ವಲ್ಪ ದೂರ ಹೋದ ಮೇಲೆ ತನ್ನ ಮೂವರು ಸ್ನೇಹಿತರಾದ ಶಶಿಧರ್, ಶಿವಕುಮಾರ್ ಹಾಗೂ ರಮೇಶ್ ಬಾಬುನನ್ನ ಕರೆಸಿಕೊಂಡಿದ್ದಾನೆ.
ನಾಲ್ವರು ಸೇರಿ ಯುವತಿಯನ್ನು ಅಪಹರಿಸಿ ಮನೆಯೊಂದರಲ್ಲಿ ಕೂಡಿ ಹಾಕಿ 2 ದಿನಗಳ ಕಾಲ ನಿರಂತರ ಅತ್ಯಾಚಾರವೆಸಗಿ ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ದಿನ್ನೇಹೊಸಹಳ್ಳಿ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪ್ ಕಂಡು ಈ ಮೂವರು ಯುವತಿಯನ್ನ ಬಿಟ್ಟು ಪರಾರಿಯಾಗಿಲು ಯತ್ನಿಸಿದ್ದಾರೆ.
ಅನುಮಾನಾಸ್ಪದವಾಗಿ ಹೋಗುತ್ತಿದ್ದ ಆರೋಪಿಗಳನ್ನು ಹಿಡಿದು, ಯುವತಿಯನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಸದ್ಯಕ್ಕೆ ಸ್ವಾಂತ್ವನ ಕೇಂದ್ರವೊಂದರಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.