×
Ad

ಕೈ ಬಿಡಲು ಒತ್ತಾಯಿಸಿ ಪ್ರತಿಭಟನೆ

Update: 2016-05-25 21:47 IST

ಕುಶಾಲನಗರ, ಮೇ 25: ರಾಜ್ಯ ಸಭೆ ಸದಸ್ಯ ಸ್ಥಾನಕ್ಕೆ ಸೂಚಿಸಿರುವ ವೆಂಕಯ್ಯ ನಾಯ್ಡ್ಡುರವರ ಹೆಸರು ಕೈಬಿಡುವಂತೆ ಒತ್ತಾಯಿಸಿ ನಗರದ ಗಣಪತಿ ದೇವಾಲಯದ ಫೀಲ್ಡ್ ಮಾರ್ಷಲ್ ಕಾರ್ಯಪ್ಪವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧ್ಯಕ್ಷ ವೆಂಕಟೇಶ ಪೂಜಾರಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ವೆಂಕಟೇಶ ಪೂಜಾರಿಯವರ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ವೆಂಕಯ್ಯನಾಯ್ಡುರವರ ಪ್ರತಿಕೃತಿ ದಹಿಸಿ, ಅವರ ಹೆಸರನ್ನು ಸೂಚಿಸಿರುವ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

   

ಈ ಸಂದರ್ಭ ಮಾತನಾಡಿದ ಅವರು, ಬಿಜೆಪಿಯಿಂದ ಸತತವಾಗಿ ರಾಜ್ಯ ಸಭೆಗೆ ಕಳೆದ ಮೂರು ಬಾರಿ ಆಯ್ಕೆಯಾಗಿರುವ ವೆಂಕಯ್ಯನಾಯ್ಡುರವರು ರಾಜ್ಯದ ನೆಲ, ಜಲ, ಗಡಿ, ಭಾಷೆ ಮತ್ತು ರೈತರ ಆತ್ಮಹತ್ಯೆ ವಿಚಾರವಾಗಿ ಇದುವರೆಗೂ ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸಿಲ್ಲ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿಕೊಂಡು ಕನ್ನಡಿಗರ ಧ್ವನಿಯಾಗದೆ ನಾಡಿಗೆ ದ್ರೋಹ ಬಗೆಯುತ್ತಿರುವ ವೆಂಕಯ್ಯ ನಾಯ್ಡುರವರ ಹೆಸರನ್ನು ರಾಜ್ಯಸಭೆಗೆ ಈ ಬಾರಿಯು ಬಿಜೆಪಿ ಪಕ್ಷದವರು ಸೂಚಿಸಿರುವುದು ನಾಚಿಗೇಡಿನ ವಿಷಯ ಎಂದರು. ಈ ಸಂದರ್ಭ ವೇದಿಕೆಯ ಪ್ರಧಾನ ಕಾರ್ಯದರ್ಶಿ ದಿನೇಶ್, ಉಪಾಧ್ಯಕ್ಷ ನಾಗೇಗೌಡ ಕಾರ್ಯದರ್ಶಿ ಸತೀಶ್, ಸರಳಾ ರಾಮಣ್ಣ, ಹರೀಶ್, ದೇವದಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News