×
Ad

ದ್ವಿತೀಯ ಪಿಯು ಫಲಿತಾಂಶ: ಕೊಡಗು ಜಿಲ್ಲೆಗೆ 3ನೆ ಸ್ಥಾನ

Update: 2016-05-25 21:48 IST

ಮಡಿಕೇರಿ, ಮೇ 25: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕೊಡಗು ಜಿಲ್ಲೆ ಮೂರನೆ ಸ್ಥಾನ ಪಡೆದಿದೆ. 2016ರ ಮಾರ್ಚ್‌ನಲ್ಲಿ ನಡೆದ ಪರೀಕ್ಷೆ ಬರೆದ 5,390 ವಿದ್ಯಾರ್ಥಿಗಳಲ್ಲಿ 4,277 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.79.35 ರಷ್ಟು ಫಲಿತಾಂಶ ಬಂದಿದೆ. 886 ಮಂದಿ ವಿದ್ಯಾರ್ಥಿಗಳು ಹಾಗೂ 2,608 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ 1,822 ಮಂದಿ ಪರೀಕ್ಷೆ ಬರೆದಿದ್ದು 1,203 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 66ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 2,616 ವಿದ್ಯಾರ್ಥಿಗಳಲ್ಲಿ 2,249 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ,85.97ರಷ್ಟು ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ 952 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 825 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.86.66ರಷ್ಟು ಫಲಿತಾಂಶ ಬಂದಿದೆ. ಶೇ.100ರಷ್ಟು ಫಲಿತಾಂಶ ಪಡೆದ ಕಾಲೇಜುಗಳು:

ಒಟ್ಟು ಜಿಲ್ಲಾ ಫಲಿತಾಂಶದಲ್ಲಿ ಕುಶಾಲನಗರ, ಐಶ್ವರ್ಯ ಪಪೂ ಕಾಲೇಜು ಹಾಗೂ ಗೋಣಿಕೊಪ್ಪದ ವಿದ್ಯಾನಿಕೇತನ ಪಪೂ ಕಾಲೇಜು, ವಾಣಿಜ್ಯ ವಿಭಾಗದಲ್ಲಿ ನಗರದ ಸಂತ ಮೈಕಲರ ಶಾಲೆ, ಶನಿವಾರ ಸಂತೆಯ ಕಾವೇರಿ ಪದವಿ ಪೂರ್ವ ಕಾಲೇಜು, ವಿಜ್ಞಾನ ವಿಭಾಗದಲ್ಲಿ ಮೂರ್ನಾಡು ಪಪೂ ಕಾಲೇಜು ಶೇ.100 ಸಾಧನೆ ಮಾಡಿವೆ. ವಿಜ್ಞ್ಞಾನ ವಿಭಾಗದಲ್ಲಿ ಗೋಣಿಕೊಪ್ಪದ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿರ್ಮಲಾ ಕುಟ್ಟಪ್ಪ(585) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಬೋಜಮ್ಮ(584), ತನ್ಮಯಿ ಎಂ.ಪಿ(584), ಅನುಶಿಕ್ ಶತಾಬ್ಧಿ(584), ತೃತೀಯ ಸ್ಥಾನದಲ್ಲಿ ಸಮಂತ್ ಗಣಪತಿ(581). ವಾಣಿಜ್ಯ ವಿಭಾಗದಲ್ಲಿ ನಗರದ ಸಂತ ಮೈಕಲರ ಶಾಲೆಯ ದ್ಯಾಫನ ಡಿಸೋಜಾ(ಪ್ರಥಮ) (581), ಖತೀಜಮ್ಮ(578), ಶನಿವಾರಸಂತೆ ವಿಘ್ನೇಶ್ವರ ಪಿಯು ಕಾಲೇಜು ಬಿಂದು ಕೆ.ಪಿ.(578) ದ್ವಿತಿಯ, ನಗರದ ಸಂತ ಜೋಸೆಫರ ಕಾಲೇಜಿನ ನಿಶಿತಾ ವಿ.(576), ಗೋಣಿಕೊಪ್ಪದ ಕಾವೇರಿ ಪಪೂ ಕಾಲೇಜಿನ ತಸ್ಮನ್ ವಿ.(576) ತೃತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಕೂಡಿಗೆ ಸರಕಾರಿ ಪಪೂ ಕಾಲೇಜಿನ ಗೌತಮ್ ಟಿ.ವಿ(546)ಪ್ರಥಮ, ನಗರದ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿನಿ ರಶ್ಮಿತಾ ಯು.(539)(ದ್ವಿತೀಯ), ಚೇರಂಬಾಣೆ ಅರುಣ ಪಪೂ ಕಾಲೇಜಿನ ಅರುಣಾಕ್ಷಿ(532) ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಟಿ.ಸ್ವಾಮಿ ತಿಳಿಸಿದ್ದಾರೆ. ಜುಲೈ ತಿಂಗಳಿನಲ್ಲಿ ಪೂರಕ ಪರೀಕ್ಷೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಜುಲೈನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಕ್ಲಿಷ್ಟಕರವಾದ ಭಾಷೆ, ವಿಷಯಗಳಾದ ಆಂಗ್ಲಭಾಷೆ, ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ವಿಷಯಗಳಲ್ಲಿ 20 ದಿವಸಗಳ ಕಾಲ ಪ್ರತಿ ವಿಷಯದಲ್ಲಿ ಪ್ರತಿ ದಿವಸ 1 ಗಂಟೆಯಂತೆ ಒಟ್ಟು 20 ಗಂಟೆಗಳ ವಿಶೇಷ ಪಾಠ ಬೋಧನೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಪಪೂ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News