ಅನುತ್ತೀರ್ಣನಾದ ವಿದ್ಯಾರ್ಥಿ ನೇಣಿಗೆ ಶರಣು
Update: 2016-05-25 22:20 IST
ಮಡಿಕೇರಿ,ಮೇ25 : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಣಿಕೊಪ್ಪ ಸಮೀಪ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಕಾವೇರಿ ಕಾಲೇಜಿನ ವಿದ್ಯಾರ್ಥಿ ಕಡೇಮಾಡ ರಾಜಪ್ಪ (17) ಎಂಬಾತನೇ ನೇಣಿಗೆ ಶರಣಾದಾತ. ಬಿ.ಶೆಟ್ಟಿಗೇರಿ ಗ್ರಾಮದ ಸೋಮಯ್ಯ ಹಾಗೂ ರೀನಾ ದಂಪತಿಯ ಪುತ್ರ ರಾಜಪ್ಪ, ಮೊಬೈಲ್‌ನಲ್ಲಿ ಫಲಿತಾಂಶ ವೀಕ್ಷಿಸಿ ತನ್ನ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಪೋಷಕರು ಪಟ್ಟಣಕ್ಕೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ. ಅರ್ಥಶಾಸ್ತ್ರದಲ್ಲಿ ಅನುತ್ತೀರ್ಣನಾಗಿದ್ದೇ ಸಾವಿಗೆ ಕಾರಣವಾಗಿದೆ.