ಪ್ರತಾಪ್ ಸಿಂಹ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಅಬ್ದುಲ್ ಅಝೀಮ್ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ನೇಮಕ
Update: 2016-05-26 14:00 IST
ಬೆಂಗಳೂರು, ಮೇ 26: ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಗುರುವಾರ ಬಿಡುಗಡೆಯಾಗಿದ್ದು, ಮೈಸೂರಿನ ಸಂಸದ
ಪ್ರತಾಪ್ ಸಿಂಹ ಯುವ ಮೋರ್ಚಾ ಅಧ್ಯಕ್ಷರಾಗಿ , ಮಾಜಿ ಎಂಎಲ್‌ಸಿ ಅಬ್ದುಲ್ ಅಝೀಮ್ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯ ನೂತನ ಪದಾಧಿಗಳ ಪಟ್ಟಿ ಬಿಡುಗಡೆ ಮಾಡಿದರು.
ಯಡಿಯೂರಪ್ಪ ಅಧ್ಯಕ್ಷರಾಗಿರುವ ಬಿಜೆಪಿ ರಾಜ್ಯ ಸಮಿತಿಗೆ 10 ಉಪಾಧ್ಯಕ್ಷರು, 5 ಪ್ರಧಾನ ಕಾರ್ಯದರ್ಶಿ, 10 ಕಾರ್ಯದರ್ಶಿ, 2 ಮಾಧ್ಯಮ ವಕ್ತಾರರು,1 ಮಾಧ್ಯಮ ಸಂಯೋಜಕರು, 4 ಮಾಧ್ಯಮ ಸಹ-ವಕ್ತಾರರು ಇದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿಯ ವಿವಿಧ 8 ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.