×
Ad

ಮೂವರು ಬಲಿ: ನಾಲ್ವರು ಗಂಭೀರ

Update: 2016-05-26 22:12 IST

ವಿರಾಜಪೇಟೆ, ಮೇ 26: ವಿರಾಜಪೇಟೆ-ಕಣ್ಣನೂರು ಅಂತಾರಾಜ್ಯ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಬೆಳಗಿನ ಜಾವ 3:45 ವೇಳೆಗೆ ಉಂಟಾದ ಭೀಕರ ರಸ್ತೆ ಅಪಘಾ ತದಲ್ಲಿ ಕೇರಳದ ವಡಗರ ತಾಲೂಕಿನ ಪಯ್ಯೋಳಿ ನಿವಾಸಿಗಳಾದ ಮೂವರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟವರನ್ನು ಆಶಿಖ್(19), ಮಿನಾಝ್(19), ಯಾಸೀನ್(18) ಎಂದು ತಿಳಿದು ಬಂದಿದೆ. ಅಲ್ಲದೆ, ನಾಲ್ವರು ಗಂಭೀರ ಗಾಯಗೊಂಡಿದ್ದು, ಉಳಿದ ಮೂವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಗಾಯಳುಗಳನ್ನು ಕೇರಳ ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ,

ಕೇರಳದ ಎಂ.ಎಚ್.ಇ.ಎಸ್ ಕಾಲೇಜಿನ ಪದವಿ ತರಗತಿ ವಿದ್ಯಾರ್ಥಿಗಳಾಗಿರುವ ಇವರು ಪ್ರವಾಸ ನಿಮಿತ್ತ ಬೆಂಗಳೂರಿಗೆ ಹೊರಟಿದ್ದರು ಎನ್ನಲಾಗಿದೆ. ಪೆರಂಬಾಡಿ ಚೆಕ್ ಪೋಸ್ಟ್‌ನಿಂದ 1/2 ಕಿ.ಮೀ. ದೂರದಲ್ಲಿ ಬೆಂಗಳೂರು ಕಡೆಯಿಂದ ಕೊಚ್ಚಿ ನ್‌ಗೆ ಶುಂಠಿ ಸಾಗಿಸುತ್ತಿದ್ದ ಮಂಗಳೂರು ಮೂಲದ ಲಾರಿ ನಿಯಂತ್ರಣ ತಪ್ಪಿಟವೇರ ವಾಹನದ ಮೇಲೆ ಅಪ್ಪಳಿಸಿತು ಎನ್ನಲಾಗಿದೆ.

 ಅಪಘಾತದ ಸುದ್ದಿ ತಿಳಿದೊಡನೆ ಕಾರ್ಯಾಚರಣೆಗೆ ಮುಂದಾದ ವೀರಾಜಪೇಟೆ ಪೊಲೀಸ್ ಠಾಣಾ ಸಿಬ್ಬಂದಿ ಮತ್ತು ಆಸ್ಪತ್ರೆಯ ಸಿಬ್ಬಂದಿ ಮೃತರು ಮತ್ತು ಗಾಯಗೊಂಡವರ ಶರೀರಗಳನ್ನು ಹೊರತೆಗೆಯಲು ಹರ ಸಾಹಸ ಪಡಬೇಕಾಯಿತು. ಗಂಟೆಗಳ ಪ್ರಯತ್ನದಿಂದಾಗಿ ಟವೇರ ವಾಹನವನ್ನು ಚೂರುಮಾಡಿ ಹೊರತೆಗೆದ ಮೃತದೇಹಗಳನ್ನು ವಿರಾಜ ಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಜೆಯ ವೇಳೆಗೆ ಕೇರಳಕ್ಕೆ ಸಾಗಿಸಲಾಯಿತು ಎಂದು ತಿಳಿದು ಬಂದಿದೆ

  

. ಮೂರುದಿನದಲ್ಲಿ ಎರಡನೆ ಅಪಘಾತ: ಇಂದು ಬೆಳಗಿನ ಜಾವ ಸಂಭವಿಸಿದ ಈ ಅಪಘಾತವು ಮೂರು ದಿನಗಳ ಅಂತರದಲ್ಲಿ ಸಂಭವಿಸಿದ ಎರಡನೆ ಅಪಘಾತವಾಗಿದೆ. ಇದೇ ತಿಂಗಳು 23ರ ಸೋಮವಾರ ರಾತ್ರಿ ಇದೇ ರಸ್ತೆಯ ಕಾಕತ್ತೋಡು ಶ್ರೀ ಭಗವತಿ ದೇವಾಲಯದ ಸಮೀಪ ಟೆಂಪೋ ಟ್ರಾವೆಲರ್ ಮಗುಚಿ ಬಿದ್ದು ಇರಿಟ್ಟಿ ನಿವಾಸಿ ಉಣ್ಣಿ(28)ಎಂಬ ಯುವಕ ಮೃತಪಟ್ಟು ಇತರ 16ಜನ ಗಾಯಗೊಂಡಿದ್ದರು. ಇಂದು ಬೆಳಗಿನ ಜಾವ ಉಂಟಾದ ಈ ಭೀಕರ ಅಪಘಾತದ ಸುದ್ದಿಯಿಂದ ವೀರಾಜಪೇಟೆ ಹಾಗೂ ಸುತ್ತಮುತ್ತಲ ಪ್ರದೇಶದ ಜನರು ಬೆಚ್ಚಿ ಬೀಳುವಂತಾಯ್ತು. ಸಂಚಾರ ಅಸ್ತವ್ಯಸ್ತ:  ಅಪಘಾತದ ಪರಿಣಾಮ ವೀರಾಜಪೇಟೆ-ಕಣ್ಣನೂರು ಅಂತಾರಾಜ್ಯ ಹೆದ್ದಾರಿಯಲ್ಲಿ ಸುಮಾರು 5 ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತ ಗೊಂಡಿತ್ತು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸ್ಥಳಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News