ಬೆಂಗಳೂರಿನ ಸೇಂಟ್ ಲೂಥ್ರಾನ್ ಚರ್ಚ್ ನೆಲಸಮ: 10 ಜನ ಕಿಡಿಗೇಡಿಗಳ ಕೃತ್ಯ
Update: 2016-05-27 12:27 IST
ಬೆಂಗಳೂರು, ಮೇ 27: ಇಲ್ಲಿನ ಪಿಳ್ಳಣ್ಣ ಗಾರ್ಡನ್ ಪ್ರದೇಶದಲ್ಲಿರುವ ಸೇಂಟ್ ಲೂಥ್ರಾನ್ ಚರ್ಚ್ ಮೇಲೆ 10 ಜನ ಕಿಡಿಗೇಡಿಗಳ ಗುಂಪು ದಾಳಿ ನಡೆಸಿದ್ದಲ್ಲದೆ, ಜೆಸಿಬಿ ಬಳಸಿ ಚರ್ಚ್‌ನ್ನು ನೆಲಸಮಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.
ಚರ್ಚ್ ಆಡಳಿತ ಮಂಡಳಿ ನೀಡಿರುವ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ 10 ಜನರನ್ನು ಬಂಧಿಸಿದ್ದಾರೆ. ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.