×
Ad

ತಪ್ಪಿತಸ್ಥರ ವಿರುದ್ಧ ಕ್ರಮ ಕೆಗೊಳಿ್ಳ: ಆರಗ

Update: 2016-05-27 22:13 IST

ತೀರ್ಥಹಳ್ಳಿ, ಮೇ 27: ಪಟ್ಟಣದ ಸರಕಾರಿ ಜೂನಿ ಯರ್ ಕಾಲೇಜ್ ಮೈದಾನದ ಪಕ್ಕದ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹವಾಗಿದ್ದ 5 ಟಿಪ್ಪರ್ ಮರಳನ್ನು ಬಿಜೆಪಿ ಮುಖಂಡರು ಗಮನಿಸಿ ತಾಲೂಕು ಆಡಳಿತಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಆ ಮರಳನ್ನು ವಶಪಡಿಸಿಕೊಂಡಿದ್ದು, ಅಕ್ರಮ ಮರಳು ಸಂಗ್ರಹ ಮಾಡಿದ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ. ಅಕ್ರಮ ಮರಳು ಸಂಗ್ರಹವಾದ ಪ್ರದೇಶಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 3, 4 ತಿಂಗಳಿಂದ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟ ನಿರಂತರ ವಾಗಿ ನಡೆಯುತ್ತಿದ್ದರೂ, ತಾಲೂಕು ಆಡಳಿತ ನಿಷ್ಕ್ರಿಯಗೊಂಡಿದೆ. ಕ್ಷೇತ್ರದ ಶಾಸ ಕಿಮ್ಮನೆರತ್ನಾಕರ್ ಬೆಂಬಲಿಗರಾದ ಕಾಂಗ್ರೆಸ್ ಮುಖಂಡರು ಈ ಕೃತ್ಯದಲ್ಲಿ ತೊಡಗಿದ್ದಾರೆ ಎಂದರು.

ಬುಧವಾರದಂದು ಅಕ್ರಮ ಮರಳು ಸಂಗ್ರಹದ ವಿಚಾರದ ಬಗ್ಗೆ ತಹಶೀಲ್ದಾರ್‌ರವರಿಗೆ ದೂರು ಸಲ್ಲಿಸಿದರೆ, ಜವಾಬ್ದಾರಿ ಸ್ಥಾನದಲ್ಲಿರುವ ಇವರು ಸಹ ಅಕ್ರಮ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ನಂತರ ಈ ವಿಚಾರ ವನ್ನು ಲೋಕೋಪಯೋಗಿಇಲಾಖೆಗೆ ತಿಳಿಸಲಾಗಿದೆ ಎಂದರು.

ಮೈದಾನದ ಪಕ್ಕದ ಕುಶಾವತಿ ಹೊಳೆಯ ಮೈದಾನದ ದಂಡೆಯನ್ನು ಒಡೆದು ಲಾರಿಹೋಗಲು ದಾರಿಮಾಡಿಕೊಂಡ ಅಕ್ರಮ ಮರಳು ಸಾಗಾಣಿಕೆದಾರರು ಕಳೆದ ಒಂದು ವಾರದಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಶ್ರೀಮಂತರಿಗೆ ನಿಷ್ಠೆ ತೋರಿಸುವ ಕ್ಷೇತ್ರದ ಶಾಸಕರು ತಮ್ಮ ಹಿಂಬಾಲಕರ ದೌರ್ಜನ್ಯದಿಂದ ಮರಳು ಲೂಟಿ ನಡೆಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News