ಭಟ್ಕಳ: ತಾಲೂಕು ಮಟ್ಟದ ದೇಹದಾರ್ಢ್ಯ ಸ್ಪರ್ಧೆ
ಭಟ್ಕಳ, ಮೇ 29: ಭಟ್ಕಳ ತಾಲೂಕು ದೇಹದಾರ್ಢ್ಯ ಸಂಸ್ಥೆಯು ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಮಿ.ಭಟ್ಕಳ್-16 ಬಿರುದನ್ನು ಅಲ್ಟಿಮೇಟ್ ಫಿಟ್ನೆಸ್ ಕ್ಲಬ್‌ನ ಸದಸ್ಯ ಮಂಜುನಾಥ್ ನಾಯ್ಕೆ ಪಡೆದುಕೊಂಡಿದ್ದಾರೆ.
55ಕೆ.ಜಿ. ವಿಭಾಗದಲ್ಲಿ ರಾಘವೇಂದ್ರ ನಾಯ್ಕ (ಫ್ರೆಂಡ್ಸ್‌ಜಿಮ್), 60ಕೆ.ಜಿ. ವಿಭಾಗದಲ್ಲಿ ಮಂಜುನಾಥ್ ನಾಯ್ಕ (ಅಲ್ಟಿಮೇಟ್ ಫಿಟ್ನೆಸ್‌ಕ್ಲಬ್), 65ಕೆ.ಜಿ. ವಿಭಾಗದಲ್ಲಿ ಕುಮಾರ್ ಎಂ.ನಾಯ್ಕ (ಅನ್ಮೋಲ್ ಮಲ್ಟಿ ಜಿಮ್ ಮುರುಡೇಶ್ವರ), 70ಕೆ.ಜಿ. ವಿಭಾಗದಲ್ಲಿ ಮಹೇಶ್ ನಾಯ್ಕ (ಫ್ರೆಂಡ್ಸ್‌ಜಿಮ್), 75ಕೆ.ಜಿ. ವಿಭಾಗದಲ್ಲಿ ಯೋಗೇಶ್ ನಾಯ್ಕ ( ಫ್ರೆಂಡ್ಸ್ ಜಿಮ್), 75ಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ರಹ್ಮತುಲ್ಲಾ (ಸುಗ್ರಾ ಜಿಮ್) ವಿಜೇತರಾಗಿದ್ದಾರೆ.
ಸ್ಪರ್ಧೆಗಳನ್ನು ಸುನಿಲ್ ಬಿ.ನಾಯ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಸೋಸಿಯೇಶನ್ ಅಧ್ಯಕ್ಷ ಮೌಲಾನ ಅಝೀಝುರ್ರಹ್ಮಾನ್ ನದ್ವಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯ್ಕ, ತಂಝೀಮ್ ಮುಖಂಡ ಇನಾಯತುಲ್ಲಾ ಶಾಬಂದ್ರಿ, ನಝೀರ್ ಕಾಶಿಮಜಿ, ಶ್ರೀನಿವಾಸ್ ನಾಯ್ಕ, ಪ್ರಕಾಶ್ ನಾಯ್ಕ, ಗಣೇಶ್ ನಾಯ್ಕ, ಗಣಪತಿ ನಾಯ್ಕ, ಜಿ.ಡಿ. ಭಟ್, ಎಸ್.ಡಿ.ನಾಯ್ಕ, ಪಾಸ್ಕಲ್ ಗೋಮ್ಸ್ ಮತ್ತಿತರರು ಉಪಸ್ಥಿತರಿದ್ದರು.
ಗಂಗಾಧರ್ ನಾಯ್ಕ ಹಾಗೂ ಮಂಜುನಾಥ್ ನಾಯ್ಕಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಮಿ.ಉಡುಪಿ ಖ್ಯಾತಿಯ ಅಕ್ಷಯ್ ನಾರಾಯಣ ಮೊಗೇರ್, ಮಿ.ಉತ್ತರ ಕನ್ನಡ ಖ್ಯಾತಿಯ ಸಂದೀಪ್ ಆಚಾರ್ಯ, ಭಟ್ಕಳ ದೇಹದಾರ್ಢ್ಯ ಸಂಸ್ಥೆಯ ಅಧ್ಯಕ್ಷ ಹಾಗೂ ಮೀ.ಲಖ್ನೋ ಖ್ಯಾತಿಯ ಮೌಲಾನ ಅಝೀಝುರ್ರಹ್ಮಾನ್ ನದ್ವಿ, ಉಪಾಧ್ಯಕ್ಷ ನಝೀರ್ ಕಾಶಿಮಜಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು.