×
Ad

‘ಪೊಲೀಸರು ಜನಸ್ನೇಹಿ ಕರ್ತವ್ಯದಿಂದ ಸಮಾಜದಲ್ಲಿ ಸ್ವಾಸ್ಥ ಕಾಪಾಡಲು ಸಾಧ್ಯ’

Update: 2016-05-29 22:21 IST

ಕುಶಾಲನಗರ, ಮೇ 29: ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿಭಾಯಿಸುವುದರೊಂದಿಗೆ ಸಮಾಜದಲ್ಲಿ ಉತ್ತಮ ಸ್ವಾಸ್ಥ ಕಾಪಾಡಲು ಸಾಧ್ಯ ಎಂದು ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಟಿ.ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಕಾವೇರಿ ನಿಸರ್ಗಧಾಮದಲ್ಲಿ ಕಾವೇರಿ ಸುದ್ದಿ ಸೆಂಟರ್ ಬಳಗದ ಆಶ್ರಯದಲ್ಲಿ ಕುಶಾಲನಗರ ಪೊಲೀಸ್ ಠಾಣೆಯಿಂದ ಸುಂಟಿಕೊಪ್ಪಠಾಣೆಗೆ ವರ್ಗಾವಣೆಗೊಂಡ ಠಾಣಾಧಿಕಾರಿ ಅನೂಪ್ ಮಾದಪ್ಪ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ನಿಷ್ಠೆಯಿಂದ ಪ್ರಾಮಾಣಿಕರಾಗಿ ಕರ್ತವ್ಯ ಸಲ್ಲಿಸುವುದರೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅನೂಪ್ ಮಾದಪ್ಪ ಸಂಪೂರ್ಣ ಯಶಸ್ವಿಯಾಗಿದ್ದಾರೆ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದಭರ್ ಬಳಗದ ವತಿಯಿಂದ ವರ್ಗಾವಣೆಗೊಂಡ ಅನೂಪ್ ಮಾದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ನೂತನವಾಗಿ ನಿಯೋಜನೆಗೊಂಡ ಠಾಣಾಧಿಕಾರಿ ಮಹೇಶ್ ಅವರನ್ನು ಇದೇ ಸಂದಭರ್ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕುಶಾಲನಗರ ಅಪರಾಧ ವಿಭಾಗದ ಪೊಲೀಸ್ ಠಾಣಾಧಿಕಾರಿ ಪೂಣಚ್ಚ, ವಲಯ ಅರಣ್ಯಾಧಿಕಾರಿ ಎಂ.ಎಸ್.ಚಿಣ್ಣಪ್ಪ, ಉದ್ಯಮಿಗಳಾದ ಮೊದು, ಕೆ.ಕೆ.ಭಾಸ್ಕರ್, ಸತೀಶ್ ಉಪಸ್ಥಿತರಿದ್ದರು.

ಕಾವೇರಿ ಸುದ್ದಿ ಸೆಂಟರ್ ಬಳಗದ ಸಂಚಾಲಕ ಎಂ.ಎನ್.ಚಂದ್ರಮೋಹನ್, ಬಳಗದ ಪ್ರಮುಖರಾದ ಕೆ.ಜಿ.ಮನು, ಭಾಸ್ಕರ್ ನಾಯಕ್, ಪತ್ರಕರ್ತರಾದ ಕೆ.ಎಸ್.ಮೂರ್ತಿ, ಕೆ.ಕೆ.ನಾಗರಾಜಶೆಟ್ಟಿ, ಎಚ್.ಎಂ.ರಘು, ವಿ.ಪಿ.ಸುಖೇಶ್, ವಿನೋದ್, ಲತೀಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News