ಟೆಂಪೊ-ಆಂಬ್ಯುಲೆನ್ಸ್ ಢಿಕ್ಕಿ: ಆಂಬ್ಯುಲೆನ್ಸ್ ಚಾಲಕ ಸ್ಥಳದಲ್ಲೇ ಮೃತ್ಯು
Update: 2016-05-30 20:45 IST
ಭಟ್ಕಳ, ಮೇ 30: ಟೆಂಪೊ ಮತ್ತು ಆಂಬ್ಯುಲೆನ್ಸ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಆಂಬ್ಯುಲೆನ್ಸ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಮಟಾ ಠಾಣಾ ವ್ಯಾಪ್ತಿಯ ಹಂದಿಗೋಣ ಗ್ಯಾಸ್ ಬಂಕ್ ಬಳಿ ಸಂಭವಿಸಿದೆ.
ವೆಂಕಟೇಶ ಹುಲುಸ್ವಾರ ಘಟನೆಯಲ್ಲಿ ಮೃತಪಟ್ಟ ಚಾಲಕ.
ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕುಮಟಾದಿಂದ ಹೊನ್ನಾವರಕ್ಕೆ ಹೊರಟಿದ್ದ ಆಂಬುಲೆನ್ಸ್‌ಗೆ ಮಹೀಂದ್ರಾ ಟೆಂಪೊ ಢಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ಆಂಬ್ಯುಲೆನ್ಸ್ ಚಾಲಕ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.