×
Ad

ನಾನು ಸಲಹೆ ನೀಡಿಲ್ಲ: ಮಾಜಿ ಸಚಿವ ಬಿ.ಎ. ಮೊಯ್ದೀನ್

Update: 2016-05-30 21:48 IST

ಮಂಗಳೂರು, ಮೇ 30: ಬಿ.ಎಂ.ಫಾರೂಕ್‌ರನ್ನು ಜೆಡಿಎಸ್ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆ ಮಾಡಿರುವುದರಲ್ಲಿ ನನ್ನ ಪಾತ್ರವಿಲ್ಲ. ಈ ಬಗ್ಗೆ ನಾನು ಯಾರಿಗೂ ಯಾವ ಸಲಹೆಯನ್ನು ನೀಡಿಲ್ಲ. ಆ ಪಕ್ಷದಲ್ಲಿ ನಾನು ಯಾವ ಪದಾಧಿಕಾರಿಯೂ ಅಲ್ಲ. ಅಲ್ಲದೆ ನಾನೀಗ ಪಕ್ಷ ರಾಜಕಾರಣದಿಂದ ದೂರ ಇದ್ದೇನೆ. ಬಿ.ಎಂ.ಫಾರೂಕ್ ನನ್ನ ಸಂಬಂಧಿ ಎನ್ನವುದು ಮಾತ್ರ ನಿಜ,ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಅವರ ಪಕ್ಷದವರು ತಗೆದುಕೊಂಡ ತೀರ್ಮಾನ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಯ್ದಿನ್ ಪತ್ರಿಕೆಗೆ ಸ್ಪಷ್ಟನೆ ಇಂದು ನೀಡಿದ್ದಾರೆ.

ನಾನು ರಾಜಕೀಯದಲ್ಲಿ ಸಕ್ರಿಯವಾಗಿದ್ದಾಗ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ. ಬಿ.ಎಂ.ಫಾರೂಕ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವುದರಲ್ಲಿ ನನ್ನ ಪಾತ್ರ ಇದೆ ಎನ್ನುವ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ನಾನು ಈ ಬಗ್ಗೆ ಸ್ಪಷ್ಟನೆ ನೀಡುತ್ತಿರುವುದಾಗಿ ಬಿ.ಎ.ಮೊಯ್ದಿನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News